ಹೊಸದಿಗಂತ ರಾಯಚೂರು:
ಮತದಾನ ಮಾಡುವುದಕ್ಕೆ ಸ್ವ ಗ್ರಾಮಕ್ಕೆ ತೆರಳಲು ಪರದಾಡಿದ ಗ್ರಾಮೀಣ ಭಾಗದ ಜನತೆ. ದೂರದ ಊರುಗಳಿಗೆ ದುಡಿಯಲು ಹೋದ ಗ್ರಾಮೀಣ ಭಾಗದ ಜನತೆ ಗ್ರಾಮಕ್ಕೆ ತೆರಳಲು ಸೋಮವಾರ ಮಧ್ಯರಾತ್ರಿಯಿಂದಲೇ ಬಸ್ಸುಗಳಿಗಾಗಿ ಕಾದು ಕಾದು ಕಂಗಾಲಾಗಿ ಹೋದರು.
ದೂರ ದೂರದ ಊರುಗಳಿಂದ ಬಂದಿದ್ದ ಸಾವಿರಾರು ಮತದಾರರು ಬಸ್ಸುಗಳಿಗಾಗಿ ಕಾಯುತ್ತಿದ್ದರು. ಆದರೆ ಗ್ರಾಮೀಣ ಭಾಗಗಳಿಗೆ ತೆರಳಲು ಬಸ್ಸುಗಳಿಲ್ಲದ ಕಾರಣಕ್ಕೆ ಸಾರ್ವಜನಿಕರು ತಾಳ್ಮೆಯನ್ನು ಕಳೆದುಕೊಂಡು ಸಿಬ್ಬಂಧಿಗಳೊಂದಿಗೆ ವಾದಕ್ಕೆ ಮುಂದಾಗುತ್ತಿರುವುದು ಕಂಡುಬಂದಿತು.
ರಾಯಚೂರಿನ ಕೇಂದ್ರೀಯ ಬಸ್ ನಿಲ್ದಾಣ ಹಾಗೂ ಕೆಲ ಗ್ರಾಮೀಣ ಭಾಗಗಳಲ್ಲಿಯೂ ಬಸ್ಸುಗಳಿಲ್ಲದೆ ಪ್ರಯಾಣಿಕರ ಪರದಾಡುವುದು ಕಂಡುಬಂದಿತು.
ಸಿಂಗಲ್ ರೂಟ್ ಬಸ್ಸುಗಳನ್ನು ಎರಡು ಮುಖ್ಯ ಇಲ್ಲದ ಕಾರಣವಾಗುತ್ತದೆ ಕ್ರಮ ಸಂಖ್ಯೆ ಹೆಚ್ಚಿನ ಸಮಸ್ಯೆ ಆಗುತ್ತಿದೆ ಎಂದು ಸಾರ್ವಜನಿಕರು ಸಾರಿಗೆ ಸಂಸ್ಥೆಯು ಸಿಬ್ಬಂಧಿಗಳೊಂದಿಗೆ ವಾದ ಮಾಡುತ್ತಿರುವುದು ಕಂಡುಬಂದಿತು.