ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕ ಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಪತ್ರಿಕಾಗೋಷ್ಠಿ ನಡೆಸಿದ್ದು, ಕಾಂಗ್ರೆಸ್ ನಾಯಕ ಸಂಸದ ರಾಹುಲ್ ಗಾಂಧಿ ಮಾತನಾಡಿದ್ದಾರೆ.
ಸರ್ಕಾರ ರಚಿಸುವ ಕುರಿತು ಹಾಗೂ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವ ಬಗ್ಗೆ ಇಂಡಿ ಒಕ್ಕೂಟದ ಸದಸ್ಯರ ಚರ್ಚೆ ಮಾಡದೇ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಹೇಳಿದರು.
ಇದು ಇಂಡಿಯಾ ಒಕ್ಕೂಟ ಮತ್ತು ಎನ್ಡಿಎ ನಡುವಿನ ಹೋರಾಟ ಮಾತ್ರ ಆಗಿರಲಿಲ್ಲ. ಇದು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ದಾಳಿ, ಪ್ರಜಾಪ್ರಭುತ್ವ ಮೇಲಿ ದಾಳಿಯ ವಿರುದ್ಧದ ಹೋರಾಟವಾಗಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲರನ್ನೂ ಬೆದರಿಸಿ ವಶಕ್ಕೆ ಪಡೆಯುವ ಕೆಲಸ ಮಾಡಿದ್ದರು.ಆದರೆ ನಮ್ಮ ಹೋರಾಟ ಸಂವಿಧಾನವನ್ನು ಉಳಿಸುವುದಾಗಿತ್ತು. ಈ ವಿಚಾರದಲ್ಲಿ ನಮ್ಮೊಂದಿಗೆ ಸೇರಿದ ಎಲ್ಲ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ. ಸಂವಿಧಾನ ಉಳಿಸುವ ನಿರ್ಧಾರದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೀರಿ ರಾಹುಲ್ ಹೇಳಿದರು.
ಇಂಡಿ ಒಕ್ಕೂಟದ ನಾವೆಲ್ಲರೂ ಹೋರಾಟ ಮಾಡಿದೆವು. ನಾವು ಎಲ್ಲರೂ ಒಂದೇ ದೃಷ್ಟಿಕೊನದಿಂದ ಹೋರಾಡಿದ್ದೇವೆ. ಷೇರು ಮಾರುಕಟ್ಟೆ ಮತ್ತು ಅದಾನಿ ಮತ್ತು ಮೋದಿಯ ನಡುವೆ ಭ್ರಷ್ಟಾಚಾರದ ಸಂಬಂಧವಿದೆ. ಆದರೆ ದೇಶವು ಒಗ್ಗಾಟಾಗಿ ಮೋದಿ ಅಮಿತ್ ಶಾ ಆಡಳಿತ ನಡೆಸುವುದು ಬೇಡ ಎಂದು ನಿರ್ಧರಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದ ರಾಹುಲ್ ಹೇಳಿದ್ದಾರೆ.
ದೇಶದ ಜನರ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತೇನೆ. ಸಂವಿಧಾನ ಉಳಿಸುವ ಕೆಲಸ ಬಡವರು ಮಾಡಿದ್ದಾರೆ. ಸಂವಿಧಾನ ದೇಶದ ಧ್ವನಿ, ಬಡ ಜನರು ಇದನ್ನು ಉಳಿಸಿದ್ದಾರೆ. ಅದೇ ರೀತಿ ನಾನು ನೀಡಿದ ಭರವಸೆ ಈಡೇರಿಸುತ್ತೇವೆ. ಜಾತಿ ಗಣತಿ, ಮಹಾಲಕ್ಷ್ಮಿ ಭರವಸೆಯನ್ನು ನಾವು ಈಡೇರಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇಂಡಿಯಾ ಒಕ್ಕೂಟದ ನಾಯಕರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ವಯನಾಡ್ ಹಾಗೂ ರಾಯ್ಬರೇಲಿ ಕ್ಷೇತ್ರದಲ್ಲಿ ಗೆದ್ದಿದ್ದು ಯಾವ ಕ್ಷೇತ್ರದಲ್ಲಿ ಉಳಿಯಬೇಕು ಎಂದು ಇನ್ನೂ ನಿರ್ಧಾರ ಮಾಡಿಲ್ಲ. ನಾವು ಆಡಳಿತ ಪಕ್ಷದಲ್ಲಿ ಇರಬೇಕೋ ಅಥವಾ ವಿಪಕ್ಷದಲ್ಲಿ ಇರಬೇಕೋ ಎಂಬ ಬಗ್ಗೆ ತೀರ್ಮಾನ ಮಾಡ್ತೇವೆ ಎಂದು ಹೇಳಿದ್ದಾರೆ.