ದೇಶ ಹಿತ, ಸಂಘಟನೆಯ ಗೆರೆ ಮೀರಿ ಹೋಗುವವರನ್ನು ಒಪ್ಪಿಕೊಳ್ಳಬಾರದು: ಬಿ.ಎಲ್.ಸಂತೋಷ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದುಗಳ ಹಿತಕ್ಕಾಗಿಯೋ ಅಥವಾ ರಾಮಮಂದಿರಕ್ಕಾಗಿಯೋ ಬಂಡಾಯ ಮಾಡಿದ್ದರೇ ಒಪ್ಪಿಕೊಳ್ಳಬಹುದಾಗಿತ್ತು, ಆದರೇ ಇದು ಕೇವಲ ವ್ಯಕ್ತಿಗತ ಸ್ವಾರ್ಥಕ್ಕಾಗಿ ಬಂಡಾಯ. ದೇಶ ಹಿತ ಮತ್ತು ಸಂಘಟನೆಯ ಗೆರೆ ಮೀರಿ ಹೋಗುವವರನ್ನು ಒಪ್ಪಿಕೊಳ್ಳಬಾರದು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಉಡುಪಿಯಲ್ಲಿ ಪಕ್ಷದ ಘಟನಾಯಕರ ಸಮಾವೇಶದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧಿಸಿರುವ ಕೆ.ರಘುಪತಿ ಭಟ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ಅಧಿಕಾರದಿಂದ ಒಂದು ವರ್ಷ ದೂರವಿರುವುದಕ್ಕೆ ಆಗುವುದಿಲ್ಲ ಎಂದರೇ ಅದರಲ್ಲಿ ಅಂತಹ ಆಯಸ್ಕಾಂತ ಏನಿದೆ, ಎಲ್ಲಾ ಅಧಿಕಾರ ಅನುಭವಿಸಿಯೂ ಪುನಃ ಟಿಕೆಟ್ ಸಿಗದಿದ್ದರೇ ತಮಗೆ ಅನ್ಯಾಯ ಆಗಿದೆ ಎನ್ನುವುದಾದರೇ ಪಕ್ಷದಲ್ಲಿ ಹತ್ತಾರು ವರ್ಷಗಳಿಂದ ದುಡಿಯುತ್ತಿರುವವಿಗೆ ಒಂದು ಬಾರಿಯೂ ಟಿಕೆಟ್ ಸಿಗದಿದ್ದಾಗ ಅವರು ಏನು ಅನ್ನಬೇಕು ? ಪಕ್ಷದ ಕಾರ್ಯಕರ್ತರಲ್ಲಿಯೂ ಆಕಾಂಕ್ಷೆಗಳಿವೆ, ಅವುಗಳಿಗೆ ಏನು ಬೆಲೆ ಬೇಸರ ವ್ಯಕ್ತಪಡಿಸಿದ್ದಾರೆ.

ನಿತ್ಯವ್ಯಸನಿಗಳಿಗೆ ಒಂದು ದಿನ ಗುಟ್ಕಾ, ಸಾರಾಯಿ ಸಿಗದಿದ್ದರೇ ಹೇಗೆ ಆಡುತ್ತಾರೋ ಹಾಗೆ, ಒಂದು ವರ್ಷ ಅಧಿಕಾರದಿಂದ ದೂರವಿದ್ದ ಕೆಲವರು ಆಡುತಿದ್ದಾರೆ. ಪಕ್ಷಕ್ಕಾಗಿ ಹತ್ತಿಪ್ಪತ್ತು ವರ್ಷಗಳಿಂದ ದುಡಿಯುತ್ತಿರುವ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಬಂಡಾಯ ಎದ್ದಿಲ್ಲ. ಈ ಬಾರಿ ಮತದಾರರ ನೊಂದಣಿಗೆ ದುಡಿದ ವಿಕಾಸ್ ಪುತ್ತೂರು ಅವರಿಗೆ ಬಂಡಾಯ ಏಳುವ ಅರ್ಹತೆ ಇದ್ದರೂ, ಪಕ್ಷದ ಆದೇಶದಂತೆ ಸುಮ್ಮನಿದ್ದಾರೆ ಎಂದರು.

ಕಳೆದ ಚುನಾವಣೆಯಲ್ಲಿ ಪಕ್ಷದಿಂದ ಆಯನೂರು ಮಂಜುನಾಥ್ ಹೊರಗೆ ಹೋದರು, ಈ ಬಾರಿ ಚುನಾವಣೆಯಲ್ಲಿ ರಘುಪತಿ ಭಟ್ ಹೊರಗೆ ಹೋಗಿದ್ದಾರೆ. ಅವರಿಬ್ಬರೂ ಬಿಜೆಪಿ ವಿರುದ್ಧ ಸ್ಪರ್ಧಿಸಿರುವುದರಿಂದ, ಬಿಜೆಪಿ ಮತದಾರರದ್ದು ಯುದ್ಧಭೂಮಿಯಲ್ಲಿ ತನ್ನ ಸಂಬಂಧಿಕರೊಂದಿಗೆ ಯುದ್ದ ಮಾಡುವಾಗ ಆತ್ಮಗ್ಲಾನಿಗೆ ಒಳಗಾದ ಅರ್ಜುನನ ಪರಿಸ್ಥಿತಿಯಾಗಿದೆ ಎಂದವರು ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!