ಹೊಸ ದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಶುಕ್ರವಾರ 28 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.ಅಲ್ಲದೆ ಒಬ್ಬರು ಸಾವಿಗೀಡಾಗಿದ್ದಾರೆ.
ಮಡಿಕೇರಿ ತಾಲೂಕಿನಲ್ಲಿ 7, ಸೋಮವಾರಪೇಟೆ ತಾಲೂಕಿನಲ್ಲಿ 9 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 12ಪ್ರಕರಣಗಳು ವರದಿಯಾಗಿವೆ.
ಇದರೊಂದಿಗೆ ಜಿಲ್ಲೆಯಲ್ಲಿನ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ 47,441ರಷ್ಟಾಗಿದ್ದು,ಕಳೆದ 24ಗಂಟೆಗಳಲ್ಲಿ 81ಮಂದಿ ಗುಣಮುಖರಾಗುವುದರೊಂದಿಗೆ ಇದುವರೆಗೆ ಒಟ್ಟು 46,227 ಮಂದಿ ಸೋಂಕು ಮುಕ್ತರಾದಂತಾಗಿದೆ. ಸತ್ತವರ ಸಂಖ್ಯೆ 448ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಪ್ರಸಕ್ತ 766 ಸಕ್ರಿಯ ಪ್ರಕರಣಗಳಿದ್ದು, 97ಕಂಟೈನ್ ಮೆಂಟ್ ವಲಯಗಳು, ಪಾಸಿಟಿವಿಟಿ ದರ ಶೇ.1.44ರಷ್ಟಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.