‘ಹೊಸ ವರ್ಷದಲ್ಲಿ ಕಡಿಮೆ ಪೊಲೀಸ್​ ಪ್ರಕರಣ ದಾಖಲಾಗಿ, ಹೆಚ್ಚು ಪ್ರೇಮ ಪತ್ರಗಳು ಬರಲಿ’: ತಿಮ್ಮಪ್ಪನಲ್ಲಿ ಬೇಡಿಕೊಂಡ ಕಂಗನಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ಕ್ವೀನ್​​ ಕಂಗನಾ ರಣಾವತ್​​ 2022ರ ಹೊಸ ವರ್ಷವನ್ನು ತಿರುಪತಿಗೆ ಭೇಟಿ ನೀಡಿ, ತಿಮ್ಮಪ್ಪನ ದರುಶನ ಪಡೆದು ಶುರುಮಾಡಿದ್ದಾರೆ.
2021ರಲ್ಲಿ ಸದಾ ಒಂದಿಲ್ಲೊಂದು ವಿವಾದಗಳಿಂದ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಕಂಗನಾ, ಶನಿವಾರ ಬೆಳ್ಳಂಬೆಳಗ್ಗೆ ಬಾಲಾಜಿ ಹಾಗೂ ಶ್ರೀಕಾಳಹಸ್ತಿ ದೇಗುಲಕ್ಕೆ ತೆರಳಿ ದೇವರ ದರುಶನ ಪಡೆದರು.
ಈ ಕುರಿತು ಇನ್​​ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿರುವ ಕಂಗನಾ, 2022ರಲ್ಲಿ ಕಡಿಮೆ ಪೊಲೀಸ್​ ಪ್ರಕರಣ, ಎಫ್​ಐಆರ್ ದಾಖಲಾಗುವಂತೆ​ ಮತ್ತು ಹೆಚ್ಚಿನ ಪ್ರೇಮ ಪತ್ರಗಳು ಬರುವಂತೆ ದೇವರ ಬಳಿ ಕೇಳಿಕೊಂಡಿದ್ದಾರೆ ಎಂದು ಬರೆದಿದ್ದಾರೆ.
ಇದೇ ವೇಳೆ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿರುವ ಕಂಗನಾ, ತಿರುಪತಿ ಬಾಲಾಜಿ ಆಶೀರ್ವಾದದೊಂದಿಗೆ ಈ ವರ್ಷ ಪ್ರಾರಂಭ ಮಾಡುತ್ತಿದ್ದೇನೆ. ಇದು ಸ್ಮರಣೀಯವಾಗಿರಲಿದೆ ಎಂದಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!