ಹೊಸದಿಗಂತ ವರದಿ,ಶ್ರೀರಂಗಪಟ್ಟಣ :
ಇತ್ತೀಚೆಗೆ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಚಿತಾಭಸ್ಮವನ್ನು ಪಟ್ಟಣದ ಹೊರ ವಲಯದಲ್ಲಿರುವ ಪಶ್ಚಿಮವಾಹಿನಿಯಲ್ಲಿನ ಕಾವೇರಿ ನದಿಗೆ ಅವರ ಮೊಮ್ಮಗ ಅಮರ್ಥ್ಯ ವಿಸರ್ಜಿಸಿದರು.
ಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿಯ ಡಾ. ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ವೈಧಿಕರ ತಂಡ ಹಿಂದೂ ಸಂಪ್ರದಾಯದ ವಿಧಿ- ವಿಧಾನಗಳೊಂದಿಗೆ ಇಲ್ಲಿನ ಪವಿತ್ರ ಕಾವೇರಿ ನದಿಗೆ ಅಸ್ತಿಯನ್ನು ವಿಸರ್ಜಿಸಲಾಯಿತು.
ಎಸ್.ಎಂ.ಕೃಷ್ಣ ಅವರ ಮೊಮ್ಮಗ ಅಮರ್ಥ್ಯ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿ, ಬಳಿಕ ಕಾವೇರಿ ನದಿಗೆ ಅಸ್ತಿಯನ್ನು ವಿಸರ್ಜಿಸಿದರು.
ಈ ವೇಳೆ ಅವರ ಕುಟುಂಬ ಸದಸ್ಯರು ಹಾಗೂ ಆಪ್ತ ವಲಯದ ಮುಖ್ಯಸ್ಥರು ಉಪಸ್ಥಿತರಿದ್ದು, ಅಸ್ತಿ ವಿಸರ್ಜನಾ ಕಾರ್ಯದಲ್ಲಿ ಪಾಲ್ಗೊಂಡು, ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಅರ್ಚಕ ಲಕ್ಷ್ಮೀಶ್ ಸೇರಿದತೆ ಇತರ ವೈಧಿಕರ ತಂಡ ಪೂಜಾ ವಿಧಿ ವಿಧಾನದ ಕಾರ್ಯವನ್ನು ಶಾಸ್ತ್ರೋಕ್ತ್ತವಾಗಿ ನೆರವೇರಿಸಿಕೊಟ್ಟರು.