ಹೊಸದಿಗಂತ, ವಿಜಯಪುರ:
ಧ್ವಜಾರೋಹಣ ವೇಳೆ ವ್ಯಕ್ತಿಯೊಬ್ಬ ಅಚಾತುರ್ಯದಿಂದ ಹಾರಿಸಿದ ಗುಂಡು ತಗುಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಭೀರ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಗ್ರಾ.ಪಂ ಎದುರು ಧ್ವಜಾರೋಹಣ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಈ ವೇಳೆ ಅಚಾತುರ್ಯದಿಂದ ಒಂದು ಗುಂಡು ಗ್ರಾಪಂ ಅಧ್ಯಕ್ಷೆ ಸೋಮವ್ವನ ತೊಡೆಗೆ ತಗುಲಿದ್ದು, ಗಾಯಗೊಂಡ ಅಧ್ಯಕ್ಷೆಯನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.
ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.