ಹೊಸದಿಗಂತ ಡಿಜಿಟಲ್ ಡೆಸ್ಕ್ :
ಹೆಲಿಕಾಪ್ಟರ್ ಘಟಕ ಸ್ಥಾಪನೆಯಿಂದ ತುಮಕೂರು ದೇಶದ ಅತಿದೊಡ್ಡ ಔದ್ಯೋಗಿಕ ಜಿಲ್ಲೆಯಾಗಿ ಬೆಳೆಯಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನ 615 ಎಕರೆ ಜಮೀನಿನಲ್ಲಿ ತಲೆ ಎತ್ತಿರುವ ಹೆಚ್‌ಎಎಲ್ ಹೆಲಿಕ್ವಾಪ್ವರ್ ಉತ್ಪಾದನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲಿ ಗುಬ್ಬಿ ತಾಲೂಕಿನ ನಿಟ್ಟೂರು ನಗರದ ಆತ್ಮೀಯ ನಾಗರೀಕ ಬಂಧು ಭಗಿನಿಯರೆ ನಿಮಗೆಲ್ಲಾ ನನ್ನ ನಮಸ್ಕಾರಗಳು ಎಂದು ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದರು.
ಕರ್ನಾಟಕ ಸಂತರು, ಋಷಿ ಮುನಿಗಳ ಭೂಮಿ. ಸಿದ್ಧಗಂಗ ಮಠದ ಕೊಡುಗೆ ಅಪರವಾಗಿದೆ. ಪೂಜ್ಯ ಶ್ರೀವಿಕುಮಾರ್ ಸ್ವಾಮೀಜಿ ತ್ರಿವಿದಾಸೋಹಿ. ನಾನು ಪೂಜ್ಯ ಸಂತರಿಗೆ ನಮಿಸುತ್ತೇನೆ. ಗುಬ್ಬಿ ಚಿದಂಬರ ಆಶ್ರಮ, ಭಗವಾನ್ ಚನ್ನಬಸವೇಶ್ವರರಿಗೂ ನಾನು ಪ್ರಣಾಮ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು.
ಬಳಿಕ ಮಾತು ಮುಂದುವರಿಸಿ, ಹೆಲಿಕಾಪ್ಟರ್ ಘಟಕ ಸ್ಥಾಪನೆಯಿಂದ ಸಾಕಷ್ಟು ಯುವಕರಿಗೆ ಉದ್ಯೋಗ ಸಿಗಲಿದೆ. ತುಮಕೂರಿನ ಸುತ್ತಾಮುತ್ತಾ ವ್ಯಾಪಾರಕ್ಕೂ ಬಹಳ ಅನುಕೂಲವಾಗಲಿದೆ ಎಂದರು.
ಕರ್ನಾಟಕದ ಉದ್ಯೋಗ ನೀಡಬಲ್ಲ, ಮಹಿಳೆಯರನ್ನು ಸಬಲೀಕರಣ ಮಾಡಬಲ್ಲ, ಭಾರತ ಸೇನೆಗೆ ಮತ್ತು ಮೇಕ್ ಇನ್ ಇಂಡಿಯಾ ಶಕ್ತಿಯನ್ನು ಇಮ್ಮಡಿಗೊಳಿಬಲ್ಲ ಯೋಜನೆ ಲೋಕಾರ್ಪಣೆಯಾಗಿದೆ. ದೇಶದ ಅತೀ ದೊಡ್ಡ ಹೆಲಿಕಾಪ್ಟರ್ ಫ್ಯಾಕ್ಟರಿ ತುಮಕೂರಿಗೆ ಸಿಕ್ಕಿದೆ. ಇಂದು ತುಮಕೂರಿನಲ್ಲಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಯೋಜನೆ ಕೂಡ ಸಿಕ್ಕಿದೆ. ಇದರ ಜೊತೆಗೆ ತುಮಕೂರು ಗ್ರಾಮ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೂ ಚಾಲನೆ ಸಿಕ್ಕಿದೆ. ಕರ್ನಾಟಕ ಯುವ ಪ್ರತಿಭೆಯ ನಾಡು. ಡ್ರೋನ್ ಉತ್ಪಾದನೆ, ತೇಜಸ್ ಉತ್ಪಾದನೆ ಸೇರಿದಂತೆ ಹಲವು ಉತ್ಪಾದನಾ ಕ್ಷೇತ್ರದಲ್ಲಿ ಆಗುತ್ತಿರುವ ಮಹತ್ತರ ಬದಲಾವಣೆಯನ್ನು ವಿಶ್ವವೇ ನೋಡುತ್ತಿದೆ. ಡಬಲ್ ಎಂಜಿನ್ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಅನ್ನೋದಕ್ಕೆ ಇದು ಉದಾಹರಣೆಯಾಗಿದೆ ಎಂದರು.
ನಾವು ವಿದೇಶವನ್ನು ಅವಲಂಬಿಸುವುದನ್ನು ನಿಲ್ಲಿಸಿ ಆತ್ಮನಿರ್ಭರತಗೆ ಒತ್ತು ನೀಡುವ ಉದ್ದೇಶದಿಂದ 2017ರಲ್ಲಿ ಹೆಎಲ್ಎಲ್ ಘಟಕ ಶಿಲನ್ಯಾಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ.ಇಂದು ನಾವು ಸೇನೆಯ ಹಲವು ಶಸ್ತ್ರಾಸ್ತ್ರಗಳನ್ನು ಭಾರತ ಉತ್ಪಾದಿಸುತ್ತಿದೆ. ಏರ್‌ಕ್ರಾಫ್ಟ್, ಹೆಲಿಕಾಪ್ಟರ್, ಫೈಟರ್ ಜೆಟ್, ಟ್ರಾನ್ಸ್‌ಫೋರ್ಟ್ ಜೆಟ್ ಸೇರಿದಂತೆ ಎಲ್ಲವನ್ನೂ ಭಾರತವೇ ನಿರ್ಮಾಣ ಮಾಡುತ್ತಿದೆ. 2014ರ ಮೊದಲು 15 ವರ್ಷಗಳಲ್ಲಿ ಏರೋಸೆಕ್ಟರ್‌ನಲ್ಲಿ ಹೂಡಿಕೆಯಾಗಿದೆ. ಅದಕ್ಕಿಂದ ದ್ವಿಗಣ ಹೂಡಿಕೆ ಕಳೆದ 8 ರಿಂದ 9 ವರ್ಷದಲ್ಲಿ ಆಗಿದೆ. ನಮ್ಮ ಸೇನೆಯಲ್ಲೀಗ ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರ ನೀಡಲಾಗುತ್ತಿದೆ. ಇದರ ಜೊತೆಗೆ ನಮ್ಮ ಡಿಫೆನ್ಸ್ ರಫ್ತು ಡಬಲ್ ಆಗಿದೆ. ಮುಂದಿನ ದಿನಗಳಲ್ಲಿ ತುಮಕೂರಿನಲ್ಲಿ ಸಾವಿರಾರು ಹೆಲಿಕಾಪ್ಟರ್ ಉತ್ಪಾದನೆಯಾಗಲಿದೆ. ಇದರಿಂದ 4 ಲಕ್ಷ ಕೋಟಿ ವ್ಯವಹಾರ ಆಗಲಿದೆ ಎಂದು ಮೋದಿ ಹೇಳಿದ್ದಾರೆ.
ಹೆಲಿಕಾಪ್ಟರ್ ಉತ್ಪಾದನೆಯಾದರೆ ನಮ್ಮ ಸೇನಾ ಶಕ್ತಿ ದ್ವಿಗುಣ ಗೊಳ್ಳಲಿದೆ.ಇಲ್ಲಿ ಹಲವು ವ್ಯಾಪಾರ, ಉದ್ಯೋಗಕ್ಕೆ ಅವಕಾಶ ಸಿಗಲಿದೆ. ಕಳೆದ 8 ವರ್ಷದಲ್ಲಿ ಸರ್ಕಾರಿ ಫ್ಯಾಕ್ಟರಿ, ಸರ್ಕಾರಿ ಉತ್ಪಾದನೆ ಹೆಚ್ಚಿಸಲಿದೆ. ಇದರ ಜೊತೆದೆ ಖಾಸಗೀಕರಣಕ್ಕೂ ಬಾಗಿಲು ತೆರಿದಿದೆ. ಇದರಿಂದ ಬಂದ ಲಾಭವನ್ನು HALನಲ್ಲಿ ನೋಡುತ್ತಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಪ್ರಧಾನಿ , ಇದೇ ಹೆಎಲ್ಎಲ್ ವಿಚಾರವನ್ನು ಹಿಡಿದು ಹಲವರು ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡಿದರು . ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಸಿದ್ದರು. ಸಂಸತ್ತಿನಲ್ಲೂ ಗದ್ದಲ ಸೃಷ್ಟಿಸಲಾಗಿತು. ಆದರೆ ಒಂದಲ್ಲ ಒಂದು ದಿನ ಸತ್ಯ ಹೊರಬರಲಿದೆ. ಇಂದು ಹೆಚ್ಎಎಲ್ ಹೆಲಿಕಾಪ್ಟರ್ ಫ್ಯಾಕ್ಟರಿ ಈ ಹಿಂದಿನ ಸುಳ್ಳು ಆರೋಪಗಳಿಗೆ ಉತ್ತರವಾಗಿದೆ ಎಂದು ಖಡಕ್ ಆಗಿ ತಿರುಗೇಟು ನೀಡಿದರು.
ಡಬಲ್ ಎಂಜಿನ್ ಸರ್ಕಾರದಿಂದ ಪ್ರತಿ ಮನೆಗೆ ನೀರು
ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,000ಕ್ಕೂ ಹೆಚ್ಚು ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದರಿಂದ ತುಮಕೂರು, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಲಾಭವಾಗಲಿದೆ. ಈ ಮೂಲಕ ಡಬಲ್ ಎಂಜಿನ್ ಸರ್ಕಾರದಿಂದ ಪ್ರತಿ ಮನೆಗೆ ನೀರು ತಲುಪಿಸುವ ಉದ್ದೇಶ ಸಾಕಾರವಾಗಿದೆ. ಈ ಬಜೆಟ್ ಸಮರ್ಥ ಭಾರತ, ಸಂಪನ್ನ ಭಾರತ, ಶಕ್ತಿಮಾನ್ ಭಾರತ್, ಸಂಪೂರ್ಣ ಭಾರತಕ್ಕೆ ಮಹತ್ವದ ಕೂಡುಗೆ ನೀಡಲಿದೆ ಎಂದು ಮೋದಿ ಹೇಳಿದರು.
ಈ ಬಜೆಟ್ ಭಾರತದಲ್ಲಿ ಉದ್ಯೋಗ ನೀಡಬಲ್ಲ ಬಜೆಟ್. ಮಹಿಳೆಯರನ್ನು ಸಬಲೀಕರಣ ಮಾಡಬಲ್ಲ ಬಜೆಟ್.ಪ್ರತಿಯೊಬ್ಬರಿಗೂ ಈ ಬಜೆಟ್ ಲಾಭ ಕೊಡಲಿದೆ. ಕೆಲ ವರ್ಗಗಳಿಗೆ ಸರ್ಕಾರಿ ಯೋಜನಗಳಿಗೆ ಸಿಗುತ್ತಿರಲಿಲ್ಲ. ಈ ಹಿಂದಿನ ವರ್ಷಗಳಲ್ಲಿ ಪ್ರತಿ ವರ್ಗಕ್ಕೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಿದ್ದೇವೆ. ಈ ಹಿಂದೆ ಈ ವರ್ಗಗಳು ಸೌಲಭ್ಯದಿಂದ ವಂಚಿತರಾಗಿತ್ತು. ಕಾರ್ಮಿಕ್ ಶ್ರಮಿಕ್ ಯೋಜನೆ ಮೂಲಕ ಕಾರ್ಮಿಕರಿಗೆ ಸೌಲಭ್ಯ ನೀಡಲಾಗಿದೆ. ಸಣ್ಣ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಆರಂಭಿಸಲಾಗಿದೆ. ಬೀದಿ ಬದಿ ವ್ಯಾಪರಿಗಳಿಗಾಗಿ ಬ್ಯಾಂಕ್ ಮೂಲಕ ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಯ ನೀಡಿದ್ದೇವೆ. ಇದೇ ಮೊದಲ ಬಾರಿಗೆ ವಿಶ್ವಕರ್ಮ ಸಮುದಾಯಕ್ಕಾಗಿ ಯೋಜನೆ ಜಾರಿಗೊಳಿಸಲಾಗಿದೆ. ಕೈಸುಬು ಮೂಲಕ ವಿಶ್ವಕರ್ಮ ಸಮುದಾಯ ಭಾರತದ ಪರಂಪರೆಯನ್ನು ಎತ್ತಿಹಿಡಿದೆ, ಕುಂಬಾರ, ಕಮ್ಮಾರ, ಅಕ್ಕಸಾಲಿಗ, ಶಿಲ್ಪಿ, ಬಡಗಿ ಸೇರಿದಂತೆ ಹಲವು ಸಮುದಾಯಗಳಿಗೆ ಸರ್ಕಾರ ವಿಶೇಷ ಯೋಜನೆ ಜಾರಿ ತಂದಿದೆ ಎಂದರು.
ಕೊರೋನಾ ಸಂದರ್ಭ ಬಡ ಕುಟುಂಬಗಳಿಗೆ ಉಚಿತ ಪಡಿತರ ನೀಡಲಾಗಿದೆ. ಇನ್ನು ಪ್ರತಿಯೊಬ್ಬರಿಗೂ ಸೂರು ನೀಡುವ ಯೋಜನೆಗಾಗಿ ಹಣ ಮೀಸಲಿಡಲಾಗಿದೆ. ಇದರಿಂದ ಕರ್ನಾಟಕ ಅನೇಕ ಬಡ ಕುಟುಂಬಗಳಿಗೆ ಮನೆ ಸಿಗಲಿದೆ. 7 ಲಕ್ಷ ರೂಪಾಯಿ ಆದಾಯವರೆಗೆ ಯಾವುದೇ ಆದಾಯ ತೆರಿಗೆ ಕಟ್ಟಬೇಕಿಲ್ಲ. ನಿವೃತ್ತ ಹೊಂದಿರುವ ಹಿರಿಯ ನಾಗರೀಕರ ಠೇವಣಿ ಮೊತ್ತವನ್ನು 15 ಲಕ್ಷ ರೂಪಾಯಿಂದ 30 ಲಕ್ಷಕ್ಕೆ ಏರಿಸಲಾಗಿದೆ. ಇದರಿಂದ ಪ್ರತಿ ತಿಂಗಳ ಸಿಗುವ ರಿಟರ್ನ್ ಹೆಚ್ಚಾಗಲಿದೆ ಎಂದು ಮೋದಿ ಹೇಳಿದರು.
ಕರ್ನಾಟಕ ಅಂದರೆ ಅಲ್ಲಿ ಸಿರಿಧಾನ್ಯ ವಿಶೇಷ. ಇದೀಗ ಕೇಂದ್ರ ಸರ್ಕಾರ ಸಿರಿಧಾನ್ಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿದೆ. ಶ್ರೀ ಅನ್ನವಾಗಿ ಸಿರಿಧಾನ್ಯವಾಗಿ ಬಡ್ತಿ ಪಡೆದಿದೆ. ಕರ್ನಾಟಕದ ರಾಗಿ ಮುದ್ದೆ, ರಾಗಿ ರೊಟ್ಟಿಯನ್ನು ಯಾರು ಮೆರಯಲು ಸಾಧ್ಯ. ಈ ಬಜೆಟ್‌ನಲ್ಲಿ ಶ್ರೀ ಅನ್ನದ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರಿಂದ ಕರ್ನಾಟಕದ ಹಲವು ಜಿಲ್ಲೆಗಳು, ಸಣ್ಣ ಸಣ್ಣ ರೈತರಿಗೆ ಉಪಯುಕ್ತ ಕೊಡುಗೆ ಸಿಗಲಿದೆ ಎಂದರು.
ಅದೇ ರೀತಿ ಇಂಡಸ್ಟ್ರೀಯಲ್ ಟೌನ್‌ಶಿಪ್‌ನಿಂದ ಔದ್ಯೋಗಿಕ ಕ್ರಾಂತಿಯಾಗಿದೆ. ಚೆನ್ನೈ, ಬೆಂಗಳೂರು , ಬೆಂಗಳೂರು ಮಂಬೈ ಹಾಗೂ ಹೈದರಾಬಾದ್ ಬೆಂಗಳೂರು ಕಾರಿಡಾರ್ ಕಾಮಗಾರಿ ನಡೆಯುತ್ತಿದೆ. ಇದರಿಂದ ಕರ್ನಾಟಕ ಪ್ರಮುಖ ನಗರಗಳ ಸಂಪರ್ಕ ಬಲಗೊಳ್ಳಲಿದೆ. ಹೈವೇ, ಬೆಂಗಳೂರು ವಿಮಾನ ನಿಲ್ದಾಣ, ಮಂಗಳೂರು ಬಂದರು, ಗ್ಯಾಸ್ ಸಂಪರ್ಕ ಸೇರಿದಂತೆ ಹಲವು ಸಂಪರ್ಕಗಳು ಜೊತೆಯಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಪ್ರಧಾನಿ ಮೋದಿಗೆ ಅಡಿಕೆಯ ಹಾರ ಹಾಕಿ ಸನ್ಮಾನ
ಹೆಚ್‌ಎಎಲ್ ಹೆಲಿಕ್ವಾಪ್ವರ್ ಉತ್ಪಾದನ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿಗೆ, ಆಯೋಜಿಸಿದ್ದ ವಸ್ತುಪ್ರದರ್ಶನ ವೀಕ್ಷಿಸಿದರು. ತುಮಕೂರು ಘಟಕದಲ್ಲಿ ನಿರ್ಮಾಣಗೊಳ್ಳಲಿರುವ ಹೆಲಿಕಾಪ್ಟರ್ ವೀಕ್ಷಿಸಿದರು. ಇದೇ ವೇಳೆ ಹೆಎಚ್‌ಎಎಲ್ ಘಚಕದ ಅಧ್ಯಕ್ಷರು ಮೋದಿಗೆ ಹೆಲಿಕಾಪ್ಟರ್ ಮಿನಿಮಾದರಿಯನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿದರು.
ತುಮಕೂರಿನ ಕೃಷಿ ಅಡಿಕೆಯ ಹಾರ ಹಾಗೂ ಅಡಿಕೆ ಹಾಳೆಯಿಂದ ತಯಾರಿಸಿದ ಪೇಟೆವನ್ನು ಉಡುಗೊರೆಯಾಗಿ ನೀಡಲಾಯಿತು. ಇದೇ ವೇಳೆ ತುಮಕೂರು ಕೈಗಾರಿಕೆ ಟೌನ್‌ಶಿಪ್ ಯೋಜನೆಗೂ ಉದ್ಘಾಟನೆ ಮಾಡಿದರು. ಇದೇ ವೇಳೆ ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರಿನಲ್ಲಿ ಜಲ್ ಜೀವನ್ ಅಭಿಯಾನದ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಿಲಾನ್ಯಾಸ ನೇರವೇರಿಸಿದರು.