ಹೊಸದಿಗಂತ ವರದಿ ಶಿವಮೊಗ್ಗ :
ರಾಷ್ಟ್ರೀಯ ರಕ್ಷಾ ವಿಶ್ವ ವಿದ್ಯಾಲಯದ ಕರ್ನಾಟಕ ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಕೆ.ಎಸ್. ಈಶ್ವರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಶುಕ್ರವಾರ ನೆರವೇರಿಸಿದರು.
ಕರ್ನಾಟಕದ ಪ್ರಥಮ ಹಾಗೂ ದೇಶದ 5 ನೇ ಕ್ಯಾಂಪಸ್ ಇದಾಗಿದ್ದು,10 ಎಕರೆ ಜಾಗದಲ್ಲಿ ಸುಮಾರು100 ವೆಚ್ಚದಲ್ಲಿ ಕ್ಯಾಂಪಸ್ ನಿರ್ಮಾಣವಾಗಲಿದೆ.
ಡಿಪ್ಲೋಮಾ ಪೊಲೀಸ್ ಸೈನ್ಸ್, ಸ್ನಾತಕೋತ್ತರ ಡಿಪ್ಲೊಮಾ ಪೊಲೀಸ್ ಸೈನ್ಸ್ ಮ್ಯಾನೆಜ್ ಮೆಂಟ್, ಸ್ನಾತಕೋತ್ತರ ಸೈಬರ್ ಸೆಕ್ಯೂರಿಟಿ ಮತ್ತು ಡಿಜಿಟಲ್ ಫೊರೆನ್ಸಿಕ್, ಕಾರ್ಪೋರೇಟ್ ಸೆಕ್ಯೂರಿಟಿ ಮ್ಯಾನೇಜ್ ಮೆಂಟ್, ಸರ್ಟಿಫಿಕೇಟ್ ಕೋರ್ಸ್ ಸೇರಿದಂತೆ ಏಳು ವಿವಿಧ ಕೋರ್ಸ್ ಗಳನ್ನು ಪ್ರಾಥಮಿಕವಾಗಿ ಆರಂಭಿಸಲಾಗುತ್ತದೆ. ಪ್ರತೀ ವಿಭಾಗಕ್ಕೆ 20 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ.