ತೆಲಂಗಾಣ ಸಚಿವಾಲಯದ ​ಕಟ್ಟಡ ಆವರಣದಲ್ಲಿ ಮಂದಿರ, ಚರ್ಚು, ಮಸೀದಿ ಉದ್ಘಾಟನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣ ರಾಜಧಾನಿ ಹೈದರಾಬಾದ್​ನಲ್ಲಿ ನಿರ್ಮಿಸಲಾಗಿರುವ ನೂತನ ಸೆಕ್ರೆಟರಿಯೇಟ್​​ ಆವರಣದಲ್ಲಿ ಶುಕ್ರವಾರ ಮಂದಿರ, ಮಸೀದಿ ಹಾಗೂ ಚರ್ಚ್ ಅನ್ನು ​ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಏಕಕಾಲಕ್ಕೆ ಉದ್ಘಾಟಿಸಿದರು.

ರಾಜ್ಯಾಡಳಿತ ಕೇಂದ್ರವಾದ ಡಾ.ಬಿ.ಆರ್​.ಅಂಬೇಡ್ಕರ್​​ ಸೆಕ್ರೆಟರಿಯೇಟ್‌ ಅನ್ನು ಏಪ್ರಿಲ್​ 30ರಂದು ಕೆಸಿಆರ್​ ಉದ್ಘಾಟಿಸಿದ್ದು, ಸೆಕ್ರೆಟರಿಯೇಟ್​​ ಆವರಣದ ನೈಋತ್ಯ ದಿಕ್ಕಿನಲ್ಲಿ ನಲ್ಲಪೋಚಮ್ಮ ಅಮ್ಮಾವರಿ ದೇಗುಲದ ಜೊತೆಗೆ ಶಿವ ಮತ್ತು ಆಂಜನೇಯ ಸ್ವಾಮಿ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅಲ್ಲದೇ, ಒಂದು ಮಸೀದಿ ಹಾಗೂ ಚರ್ಚ್​ ನಿರ್ಮಾಣ ಮಾಡಲಾಗಿದೆ. ಮೂರು ಧರ್ಮಗಳ ಪೂಜಾ ಸ್ಥಳಗಳ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್, ಸಿಎಂ ಕೆಸಿಆರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಸೇರಿದಂತೆ ಹಲವು ಸಚಿವರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಮಹಾಪೂರ್ಣಾಹುತಿ ಹಾಗೂ ಮಹಾ ಮಂಗಳಾರತಿಯಲ್ಲಿ ರಾಜ್ಯಪಾಲೆ, ಸಿಎಂ ಭಾಗವಹಿಸಿ ಪೂಜೆ ಸಲ್ಲಿಸಿದರು. ನಂತರ ಪಕ್ಕದಲ್ಲಿರುವ ಚರ್ಚ್​ಗೆ ತೆರಳಿದ ತಮಿಳಿಸೈ ಮತ್ತು ಕೆಸಿಆರ್ ಕೇಕ್ ಕತ್ತರಿಸುವ ಮೂಲಕ ಚರ್ಚ್​ ಉದ್ಘಾಟಿಸಿದರು. ಬಳಿಕ ಮಸೀದಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು.
ಎಐಎಂಐಎಂ ಅಧ್ಯಕ್ಷ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ವಿಧಾನಸಭೆಯಲ್ಲಿ ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!