VIDEO | ಶೂಟ್‌ ಮಾಡಲು ಯತ್ನಿಸಿದ ಆಗಂತುಕ : ಹೋರಾಟ ನಡೆಸಿ ಪ್ರಾಣ ಉಳಿಸಿಕೊಂಡ ತಾಯಿ, ಮಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೈದರಾಬಾದ್‌ನ ತೆಲಂಗಾಣದ ಬೇಗಂಪೇಟ್‌ನಲ್ಲಿ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಶೂಟ್‌ ಮಾಡಲು ಯತ್ನಿಸಿದ್ದಾನೆ, ಆದರೆ ತಾಯಿ ಮಗಳು ಸೇರಿ ಆತನನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಲೆಗೆ ಹೆಲ್ಮೆಟ್‌ ಧರಿಸಿ ಕೈಯಲ್ಲಿ ಗನ್‌ ಇಟ್ಟುಕೊಂಡು ಆಗಂತುಕ ಆಗಮಿಸಿದ್ದಾರೆ. ತಾಯಿ, ಮಗಳು ಹಾಗೂ ಮತ್ತೊಬ್ಬ ಮಹಿಳೆ ಸಹಾಯದಿಂದ ಆತನನ್ನು ಬೀಳಿಸಿದ್ದಾರೆ. ಹೆಲ್ಮೆಟ್‌ ತೆಗೆದು ಆತನ ಕೈಲಿದ್ದ ಗನ ಕಿತ್ತುಕೊಂಡಿದ್ದಾರೆ. ಮಹಿಳೆಯರ ದಾಳಿಗೆ ಹೆದರಿದ ಆಗಂತುಕ ಅಲ್ಲಿಂದ ಪರಾರಿಯಾಗಿದ್ದಾನೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

ಪೊಲೀಸರು ಈ ಸಂಬಂಧ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪರಿಚಯಸ್ತರಿಂದಲೇ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!