ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಮಕ್ಕಳಲ್ಲಿ ಮಧುಮೇಹ ಪ್ರಕರಣಗಳ ಹೆಚ್ಚಾಗಿದ್ದು, ಶಾಲೆಗಳಲ್ಲಿ ಮಧುಮೇಹದ ಬಗ್ಗೆ ಶಿಕ್ಷಣ ನೀಡಲು ‘ಮಧುಮೇಹ ಅಭಿಯಾನ’ ಆರಂಭಿಸಲಾಗುತ್ತಿದೆ.
ಹೌದು, ಮಧುಮೇಹ ಯಾಕೆ ಬರುತ್ತದೆ, ಬಾರದಂತೆ ತಡೆಗಟ್ಟೋದು ಹೇಗೆ, ಅದನ್ನು ತ್ವರಿತವಾಗಿ ನಿಭಾಯಿಸೋದು ಹೇಗೆ ಎನ್ನುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಗುತ್ತದೆ.
ಕಳಪೆ ಆಹಾರ ಪದ್ಧತಿ ಹಾಗೂ ಜಡ ಜೀವನಶೈಲಿಯಿಂದಾಗಿ ಮಕ್ಕಳಲ್ಲಿ ಮಧುಮೇಹ ಕಾಣಿಸುತ್ತಿದೆ. ಜೀವನಶೈಲಿಯನ್ನು ಅತಿಹೆಚ್ಚು ಬದಲಾವಣೆಯಾದ ಕಾರಣ ಮಕ್ಕಳಲ್ಲಿ ಮಧುಮೇಹ ಬರುತ್ತಿದೆ ಎಂದು ಕರ್ನಾಟಕ ರಿಸರ್ಚ್ ಸೊಸೈಟಿ ಫಾರ್‌ದಿ ಸ್ಟಡಿ ಆಫ್ ಡಯಾಬಿಟಿಸ್ ಇನ್ ಇಂಡಿಯಾ ಅಧ್ಯಕ್ಷ ಡಾ. ಮನೋಹರ್ ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳುಗಳಿಂದ ಈಗಾಗಲೇ ಬೆಂಗಳೂರಿನ ಶಾಲೆಗಳಲ್ಲಿ ಮಕ್ಕಳಿಗೆ ಮಧುಮೇಹದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿಯೂ ಮಾಡಬೇಕಿದೆ.
ಸಂವಾದ ರೀತಿಯ ತರಗತಿ ಇರಲಿದ್ದು, ಮಧುಮೇಹ ಸಂಬಂಧಿತ ಪ್ರಶ್ನಾವಳಿಯನ್ನು ಭರ್ತಿ ಮಾಡಬೇಕಿದೆ. ನವೆಂಬರ್ ತಿಂಗಳನ್ನು ವಿಶ್ವ ಮಧುಮೇಹ ಜಾಗೃತಿ ತಿಂಗಳಾಗಿ ಆಚರಿಸಲಾಗುತ್ತದೆ.