ಕೇರಳದಲ್ಲಿ ನೈಸರ್ಗಿಕ ರಬ್ಬರ್ ಉತ್ಪಾದನೆ ಏರಿಕೆ: ಐದು ವರ್ಷಗಳಲ್ಲಿ ಎರಡು ಲಕ್ಷ ಹೆಕ್ಟೇರ್‌ನತ್ತ ಚಿತ್ತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ನೈಸರ್ಗಿಕ ರಬ್ಬರ್ ಉತ್ಪಾದನೆ ಕಳೆದ ಎರಡು ವರ್ಷಗಳಲ್ಲಿ ಶೇಕಡಾ 2.1ರಷ್ಟು ಏರಿಕೆಯಾಗಿದ್ದು, ಇದೀಗ ಬರೋಬ್ಬರಿ 8,57,000 ಟನ್‌ಗಳಿಗೆ ತಲುಪುತ್ತಿದೆ.
ಕೊಟ್ಟಾಯಂನಲ್ಲಿ ಡಾ. ಸವಾರ ಧನನಿಯಾ ಅಧ್ಯಕ್ಷತೆಯಲ್ಲಿ ನಡೆದ ರಬ್ಬರ್ ಮಂಡಳಿ ಸಭೆಯಲ್ಲಿ ಈ ಅಂಕಿ ಅಂಶ ಬಿಡುಗಡೆಗೊಳಿಸಲಾಗಿದೆ.

ಈ ನಡುವೆ ರಬ್ಬರ್‌ನ ದೇಶೀಯ ಬಳಕೆ ಕೂಡಾ ಹೆಚ್ಚಳವಾಗಿದ್ದು, 2022-23ರಲ್ಲಿ 13,50,೦೦೦ ಟನ್ ಬಳಕೆಯಾಗಿದ್ದರೆ, ಕಳೆದ ವರ್ಷ 14,16೦೦೦ ಟನ್ ಬಳಕೆಯಾಗಿದೆ. ಇದು ಬಳಕೆಯಲ್ಲಿ4.9ರಷ್ಟು ಏರಿಕೆಯಾಗಿರುವುದನ್ನು ಸೂಚಿಸುತ್ತಿದೆ.2024-25ರಲ್ಲಿ ರಬ್ಬರ್ ಉತ್ಪಾದನೆ ಪ್ರಮಾಣ 8,75,000 ಟನ್, ಬಳಕೆ 14,25೦೦೦ ಟನ್ ಆಗುವ ನಿರೀಕ್ಷೆಯಿದೆ. ಇನ್ನು2023-24 ರಲ್ಲಿ4,92,682 ಟನ್ ರಬ್ಬರ್ ಆಮದು ಮಾಡಿಕೊಳ್ಳಲಾಗಿದ್ದು, 4,999 ಟನ್ ರಬ್ಬರ್ ರಫ್ತು ಮಾಡಲಾಗಿದೆ.

ರಬ್ಬರ್ ಬೋರ್ಡ್ ಹಾಗೂ ಆಟೋಮೋಟಿವ್ ಟೈರ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಗೆ ಸೇರಿದ ನಾಲ್ಕು ಪ್ರಮುಖ ಟೈರ್ ಕಂಪನಿಗಳು ನಡುವಿನ ಮಾತುಕತೆಗಳಂತೆ 69,307 ಹೆಕ್ಟೇರ್ ಪ್ರದೇಶಗಳಲ್ಲಿ ರಬ್ಬರ್ ಗಿಡಗಳನ್ನು ನಾಟಿ ಮಾಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಎರಡು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ತೋಟಗಳನ್ನು ಅಭಿವೃದ್ಧಿಪಡಿಸುವ ಗುರಿ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!