ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವಪೀಳಿಗೆಗೆ ಏಡ್ಸ್ ಬಗ್ಗೆ ಪ್ರತಿ ಮಾಹಿತಿ ಇದ್ದರೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಯುವಕರೇ ಏಡ್ಸ್ಗೆ ತುತ್ತಾಗಿದ್ದು, ಜಾಗತಿಕವಾಗಿ ಭಯಹುಟ್ಟಿಸಿದೆ.
ಸರ್ಕಾರವೂ ಇದರ ನಿಯಂತ್ರಣಕ್ಕೆ ಸತತ ಪ್ರಯತ್ನ ಮಾಡುತ್ತಲೇ ಇದೆ. ಆದರೆ ಜನರ ಜಾಗೃತಿ ಕೊರತೆ, ಏಡ್ಸ್ ಬಗ್ಗೆ ಕಡಿಮೆಯಾಗುತ್ತಿರುವ ಭಯ ಈಗ ಮತ್ತೆ ಯುವಕರಲ್ಲಿ ಏಡ್ಸ್ ಏರಿಕೆಗೆ ಕಾರಣವಾಗಿದೆ. ರಾಜ್ಯದಲ್ಲಿ ಎಚ್ಐವಿ ಸೋಂಕಿತರು ಅತಿ ಹೆಚ್ಚು ಬೆಂಗಳೂರು ನಗರದಲ್ಲಿಯೇ ಪತ್ತೆಯಾಗುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಅದರಲ್ಲೂ ಅವಿವಾಹಿತರಲ್ಲಿಯೇ ಎಚ್ಐವಿ ಸೋಂಕು ಹೆಚ್ಚಾಗುತ್ತಿದೆ. ಮದುವೆಗೂ ಮುನ್ನವೇ ಯುವಕರಲ್ಲಿ ಎಚ್ಐವಿ ಸೋಂಕು ಹೆಚ್ಚಾಗಿ ಪತ್ತೆಯಾಗುತ್ತಿದೆ. ರಾಜ್ಯದಲ್ಲಿ 1.85 ಲಕ್ಷ ಸೋಂಕಿತರಿದ್ದಾರೆ. ಇದರಲ್ಲಿ ನವವಿವಾಹಿತರೇ ಹೆಚ್ಚಿದ್ದಾರೆ.
ಬೆಂಗಳೂರಿನಲ್ಲಿ ಶೇ 20 ರಿಂದ 25 ರಷ್ಟು ಯುವಕರಲ್ಲಿಯೇ ಸೋಂಕು ಕಾಣಿಸಿಕೊಂಡಿದೆ. 14 ವರ್ಷಕ್ಕಿಂತ ಕೆಳಗಿನ ವಯಸ್ಸಿನವರಲ್ಲಿಯೂ ಈಗ ಹೆಚ್ಚಾಗಿ ಎಚ್ಐವಿ ಕಂಡುಬರುತ್ತಿದೆ. ರಾಜ್ಯದಲ್ಲಿ ಬೆಂಗಳೂರು ಹಾಗೂ ಕೋಲಾರ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಅತಿಯಾದ ಮಾದಕ ವ್ಯಸನ ಹಾಗೂ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಹೆಚ್ಚಾಗಿ ಏಡ್ಸ್ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಶಾಲೆ ಹಾಗೂ ಕಾಲೇಜುಗಳಲ್ಲಿ ಕೂಡಾ ಈ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಏಡ್ಸ್ ಲಕ್ಷಣಗಳೇನು?
ಇದ್ದಕ್ಕಿದ್ದಂತೆಯೇ ತೂಕ ಇಳಿಕೆ
ಇದ್ದಕ್ಕಿದ್ದಂತೆಯೇ ಜ್ವರ, ರಾತ್ರಿ ಬೆವರು ಇಳಿಯುವಿಕೆ
ಹೇಳಲು ಆಗದಂಥ ಸುಸ್ತು
ಕುತ್ತಿಗೆ, ಕಂಕಳ ಸುತ್ತ ಗಂಟು
ವಾರವಾದರೂ ಬೇಧಿ ನಿಲ್ಲೋದಿಲ್ಲ
ಬಾಯಿ, ಗುಪ್ತಾಂಗದಲ್ಲಿ ಹುಣ್ಣು
ಎಚ್ಐವಿಯಿಂದ ಹೀಗೆ ದೂರ ಇರಿ..
ಆಗಾಗ ಎಚ್ಐವಿ ಟೆಸ್ಟ್ ಮಾಡಿಸಿ
ಸೆಕ್ಸ್ ಮಾಡುವ ಪ್ರತಿವೇಳೆಯೂ ಕಾಂಡೋಮ್ ಬಳಕೆ ಮಾಡಿ
ಸೆಕ್ಸುಯಲ್ ಪಾರ್ಟ್ನರ್ಸ್ ಸಂಖ್ಯೆಯನ್ನು ಆದಷ್ಟು ಕಡಿಮೆ ಇಡಿ.
ಕಡಿಮೆ ರಿಸ್ಕ್ ಇರುವಂಥ ಸೆಕ್ಸ್ ಬಿಹೇವಿಯರ್ ಬೆಳೆಸಿಕೊಳ್ಳಿ
ಡ್ರಗ್ಸ್ ಬಳಕೆ ಮಾಡಲೇಬೇಡಿ
ಒಬ್ಬರು ಬಳಸಿದ ಸೂಜಿಯನ್ನು ಇನ್ನೊಬ್ಬರು ಬಳಕೆ ಮಾಡಬೇಡಿ
ಎಚ್ಐವಿ ಇರುವ ತಾಯಂದಿರು ಮಕ್ಕಳಿಗೆ ಹಾಲು ಕುಡಿಸಬೇಡಿ
ಯಾವಾಗಲೂ ಡಯಟ್ ಹಾಗೂ ವ್ಯಾಯಮಕ್ಕೆ ಒತ್ತು ಕೊಡಿ
ಧೂಮಪಾನಕ್ಕೆ ಇಂದೇ ನೋ ಹೇಳಿ, ಚೆನ್ನಾಗಿ ರೆಸ್ಟ್ ಮಾಡಿ.