ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಜಾರಿ ಬಳಿಕ ಮಹಿಳೆಯರ ಪ್ರವಾಸ ಜೋರಾಗಿದ್ದು, ಅದರಲ್ಲೂ ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚು ಪ್ರಯಾಣಿಸುತ್ತಿದ್ದು ಸಾಕಷ್ಟು ಬಸ್ ಕೊರತೆ ಎದ್ದು ಕಾಣುತ್ತಿದೆ.
ಇದೀಗ ಇದನ್ನ ಅರಿತ ರಾಜ್ಯ ಸಾರಿಗೆ ಸಚಿವ ರಾಮಲಿಂಗರೆಡ್ಡಿ ವೀಕೆಂಡ್‌ನಲ್ಲಿ ಹೆಚ್ಚು ಬಸ್‌ಗಳು ಬಿಡುವಂತೆ ಸೂಚನೆ ನೀಡಿದರು.
ವೀಕ್ ಎಂಡ್ ನಲ್ಲಿ ಪ್ರವಾಸಿ ಸ್ಥಳಗಳು ಜನರು ಹೆಚ್ಚು ತೆರಳುತ್ತಿರುವ ಹಿನ್ನೆಲೆ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಧರ್ಮ ಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳಿರುವ ರೂಟ್ ನಲ್ಲಿ ಹೆಚ್ಚಿನ ಬಸ್ ಗಳನ್ನು ಹಾಕುವಂತೆ ಸಾರಿಗೆ ಸೂಚನೆ ನೀಡಿದರು.
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಮೈಸೂರು, ಮಹಾದೇಶ್ವರ ಸ್ವಾಮಿ ಬೆಟ್ಟ, ಚಿಕ್ಕಮಗಳೂರು ಸಿಂಗದೂರು, ಸೇರಿದಂತೆ ಹಲವು ಪ್ರವಾಸಿ ತಾಣಗಳಿವೆ ಹೆಚ್ಚುವರಿ ಬಸ್ ನಿಯೋಜನೆ ಕೆಎಸ್‌ಆರ್‌ಟಿಸಿ, ಎನ್ ಡಬ್ಲುಯು ಕೆಎಸ್ ಆರ್ ಟಿಸಿ, ಎನ್ ಇ ಕೆಎಸ್ ಆರ್ ಟಿಸಿ ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸೂಚನೆ ನೀಡಿದ್ದಾರೆ.
ಕಳೆದ ವೀಕ್ ಎಂಡ್ ನಲ್ಲಿ ಮಹಿಳೆಯರು ಪ್ರವಾಸಿತಾಣಗಳಿಗೆ ಹೊರಟ ಹಿನ್ನೆಲೆ ನೂಕು ನುಗ್ಗಲಿನಂತ ಗಲಾಟೆಗಳಿಂದ ಕಿರಿಕಿರಿಗೊಳಗಾಗಿದ್ದ ಪ್ರಯಾಣಿಕರು.