ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಕೇಸ್: ಕರ್ನಾಟಕಕ್ಕೆ ಶುರುವಾಗಿದೆ ಹೊಸ ಆತಂಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕಾರ್ನಾಟಕದಲ್ಲಿ ಈ ಬೆಳವಣಿಗೆ ಹೊಸ ಆತಂಕ ಹುಟ್ಟುಹಾಕಿದೆ.

ಮುನ್ನೆಚ್ಚರಿಕಾ ಕ್ರಮಗಳ ಹೊರತಾಗಿಯೂ ಈಗ ಕೇರಳದಲ್ಲಿ ದಿನನಿತ್ಯ ಹೊಸ ಸೋಂಕಿತರ ಸಂಖ್ಯೆ ನೂರರ ಗಡಿ ದಾಟುತ್ತಿದೆ ಎಂಬುದನ್ನು ಅಂಕಿಅಂಶಗಳು ಸ್ಪಷ್ಟಪಡಿಸುತ್ತಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಕೇರಳದಲ್ಲಿ ಪ್ರಸ್ತುತ ೯೪೯ ಪಾಸಿಟಿವ್ ಪ್ರಕರಣಗಳಿವೆ.

ಈ ನಡುವೆ ಸೋಂಕಿತರ ಅಧಿಕೃತ ಅಂಕಿಅಂಶ ನೀಡಲು ಆರೋಗ್ಯ ಇಲಾಖೆ ಸಿದ್ಧವಾಗಿರದ ಹಿನ್ನೆಲೆಯಲ್ಲಿ ಆತಂಕ ಮುಂದುವರಿದಿದೆ. ಕೇರಳದಲ್ಲಿ ಇತರ ಸಾಂಕ್ರಾಮಿಕ ಜ್ವರವೂ ಹರಡುತ್ತಿದ್ದು, ಸಾಮಾನ್ಯ ಜ್ವರವೇ, ಕೋವಿಡ್ ಜ್ವರವೇ ಎಂದು ಜನತೆ ಗೊಂದಕ್ಕೊಳಗಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!