IND vs ENG: ಭಾರತ ವಿರುದ್ಧದ 5ನೇ ಟೆಸ್ಟ್‌! ಪ್ಲೇಯಿಂಗ್-11 ಘೋಷಿಸಿದ ಇಂಗ್ಲೆಂಡ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ಆತಿಥೇಯ ಇಂಗ್ಲೆಂಡ್ ತಂಡ ತಮ್ಮ ಪ್ಲೇಯಿಂಗ್-11 ಅನ್ನು ಪಂದ್ಯ ಆರಂಭಕ್ಕೆ ಒಂದು ದಿನ ಮುಂಚಿತವಾಗಿ ಘೋಷಿಸಿದೆ. ಈಗಾಗಲೇ 2-1ರಿಂದ ಮುನ್ನಡೆ ಸಾಧಿಸಿರುವ ಇಂಗ್ಲೆಂಡ್, ಸರಣಿಯ ನಿರ್ಣಾಯಕ ಪಂದ್ಯವನ್ನು ಗೆಲ್ಲುವ ಉದ್ದೇಶದಿಂದ ನಾಲ್ಕು ಪ್ರಮುಖ ಬದಲಾವಣೆಗಳನ್ನು ತಂದಿದೆ.

ಈ ಬಾರಿ ತಂಡವನ್ನು ಓಲಿ ಪೋಪ್ ಮುನ್ನಡೆಸಲಿದ್ದು, ನಾಯಕ ಬೆನ್ ಸ್ಟೋಕ್ಸ್ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಸ್ಟೋಕ್ಸ್ ಸ್ಥಾನವನ್ನು ಆರ್‌ಸಿಬಿ ತಂಡದ ಯುವ ಆಟಗಾರ ಜಾಕೋಬ್ ಬೆಥೆಲ್ ಭರ್ತಿ ಮಾಡಿದ್ದಾರೆ. ಬೆಥೆಲ್ ಕಳೆದ ನ್ಯೂಜಿಲೆಂಡ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಸ್ಪಿನ್ ವಿಭಾಗದಲ್ಲಿ ಜೋ ರೂಟ್ ಅವರಿಗೆ ಬೆಥೆಲ್ ಸಹಾಯ ಮಾಡಲಿದ್ದಾರೆ.

ತಂಡದಲ್ಲಿ ಲಿಯಾಮ್ ಡಾಸನ್ ಬದಲಿಗೆ ಜೇಮೀ ಓವರ್ಟನ್ ಅವಕಾಶ ಪಡೆದಿದ್ದಾರೆ. ಇದರಿಂದಾಗಿ ಈ ಪಂದ್ಯದಲ್ಲಿ ಇಂಗ್ಲೆಂಡ್ ನಾಲ್ಕು ವೇಗದ ಬೌಲರ್‌ಗಳನ್ನು ಕಣಕ್ಕಿಳಿಸುತ್ತಿದೆ. ವೇಗಿ ಜೋಫ್ರಾ ಆರ್ಚರ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಗಸ್ ಅಟ್ಕಿನ್ಸನ್ ಮತ್ತೆ ಅವಕಾಶ ಪಡೆದಿದ್ದಾರೆ. ಮೂರು ಪಂದ್ಯಗಳಿಂದ ಹೊರಗುಳಿದಿದ್ದ ಜೋಶ್ ಟಂಗ್ ಕೂಡ ಟೀಮ್‌ಗೆ ಮರಳಿದ್ದಾರೆ. ಮೊದಲ ನಾಲ್ಕು ಪಂದ್ಯಗಳಲ್ಲಿ ಆಡಿದ್ದ ಬ್ರೈಡನ್ ಕಾರ್ಸ್ ಅವರನ್ನು ಈ ಪಂದ್ಯಕ್ಕೆ ಕೈಬಿಡಲಾಗಿದೆ.

ಇಂಗ್ಲೆಂಡ್ ಪ್ಲೇಯಿಂಗ್-11 ಹೀಗಿದೆ:

ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್ (ನಾಯಕ), ಜೋ ರೂಟ್, ಹ್ಯಾರಿ ಬ್ರೂಕ್, ಜಾಕೋಬ್ ಬೆಥೆಲ್, ಜೇಮೀ ಸ್ಮಿತ್, ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೋಶ್ ಟಂಗ್, ಜೇಮೀ ಓವರ್ಟನ್.

ಈ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಕೈಗೊಂಡ ಬದಲಾವಣೆಗಳು ತಂಡದ ಗೆಲುವಿಗೆ ಎಷ್ಟು ಸಹಾಯ ಮಾಡುತ್ತವೆ ಎಂಬುದನ್ನು ಕಾದುನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!