IND vs ENG: 3ನೇ ಟೆಸ್ಟ್ ಪಂದ್ಯಕ್ಕೆ ತಂಡ ಘೋಷಿಸಿದ ಇಂಗ್ಲೆಂಡ್ ಪಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜುಲೈ 10ರಿಂದ ಆರಂಭವಾಗಲಿರುವ ಲಾರ್ಡ್ಸ್ ಟೆಸ್ಟ್‌ಗೆ ಇಂಗ್ಲೆಂಡ್ 16 ಸದಸ್ಯರ ಅಂತಿಮ ತಂಡವನ್ನು ಪ್ರಕಟಿಸಿದೆ. ಗಾಯದ ಕಾರಣದಿಂದ ಮೊದಲ ಎರಡು ಟೆಸ್ಟ್‌ಗಳನ್ನು ಕಳೆದುಕೊಂಡಿದ್ದ ವೇಗಿ ಗಸ್ ಅಟ್ಕಿನ್ಸನ್ ಲಾರ್ಡ್ಸ್‌ನಲ್ಲಿ ನಡೆಯುವ ಮೂರನೇ ಪಂದ್ಯಕ್ಕೆ ಮರಳಿ ತಂಡ ಸೇರಿದ್ದಾರೆ. ಜೋಫ್ರಾ ಆರ್ಚರ್ ಈಗಾಗಲೇ ಎರಡನೇ ಟೆಸ್ಟ್‌ಗೆ ಮುನ್ನ ತಂಡ ಸೇರಿದ್ದರೂ, ಪ್ಲೇಯಿಂಗ್ XIಯಲ್ಲಿ ಅವಕಾಶ ಸಿಗಲಿಲ್ಲ. ಆದರೆ, ಈ ಬಾರಿ ಕ್ರಿಸ್ ವೋಕ್ಸ್ ಬದಲಿಗೆ ಆರ್ಚರ್ ಅಥವಾ ಅಟ್ಕಿನ್ಸನ್ ಪ್ಲೇಯಿಂಗ್ ತಂಡಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಮೊದಲ ಟೆಸ್ಟ್ ಗೆದ್ದ ಇಂಗ್ಲೆಂಡ್, ಅದೇ ತಂಡದೊಂದಿಗೆ ಎರಡನೇ ಪಂದ್ಯವನ್ನೂ ಆಡಿತ್ತು. ಆದರೆ ಎಡ್ಜ್‌ಬಾಸ್ಟನ್‌ನಲ್ಲಿ ಭಾರತ 336 ರನ್ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ 58 ವರ್ಷಗಳ ನಂತರ ಆ ಮೈದಾನದಲ್ಲಿ ಜಯಗಳಿಸುವ ಐತಿಹಾಸಿಕ ಸಾಧನೆ ಭಾರತಕ್ಕೆ ಸಿಕ್ಕಿತು. ಆಕಾಶ್‌ದೀಪ್ ಭಯಾನಕ ಬೌಲಿಂಗ್ ದಾಳಿಯಿಂದ ಇಂಗ್ಲೆಂಡ್ ಕೇವಲ 271 ರನ್‌ಗಳಿಗೆ ಆಲೌಟ್ ಆಯಿತು. ಆಕಾಶ್‌ದೀಪ್ ಈ ಪಂದ್ಯದಲ್ಲಿ ಒಟ್ಟು 10 ವಿಕೆಟ್ ಕಬಳಿಸಿ ಮಿಂಚಿದರು.

ಇನ್ನು, ಶುಭ್ಮನ್ ಗಿಲ್ ಮೊದಲ ಇನ್ನಿಂಗ್ಸ್‌ನಲ್ಲಿ ಡಬಲ್ ಸೆಂಚುರಿ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿ ಗೆಲುವಿನಲ್ಲಿ ನಾಯಕತ್ವದ ಪಾತ್ರ ವಹಿಸಿದರು. ಭಾರತ 608 ರನ್ ಗುರಿ ನೀಡಿದ್ದರೂ, ಇಂಗ್ಲೆಂಡ್‌ ಅದರ ನೂರರಷ್ಟಕ್ಕೂ ತಲುಪಿಲ್ಲ. ಇದೇ ವೇಳೆ, ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ 5 ವಿಕೆಟ್‌ಗಳಿಂದ ಜಯಗಳಿಸಿತ್ತು.

ಇಂಗ್ಲೆಂಡ್ ಮೂರನೇ ಟೆಸ್ಟ್‌ ತಂಡ ಹೀಗಿದೆ:
ಬೆನ್ ಸ್ಟೋಕ್ಸ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಸ್ಯಾಮ್ ಕುಕ್, ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಜೇಮೀ ಓವರ್ಟನ್, ಓಲಿ ಪೋಪ್, ಜೋ ರೂಟ್, ಜೇಮಿ ಸ್ಮಿತ್, ಜೋಶ್ ಟಾಂಗ್, ಕ್ರಿಸ್ ವೋಕ್ಸ್.

ಭಾರತ ತಂಡದಿಂದ ಬದಲಾವಣೆ ಸಾಧ್ಯತೆ:
ಭಾರತದ ತಂಡದಲ್ಲಿಯೂ ಕೆಲವು ಬದಲಾವಣೆಗಳು ನಡೆಯಬಹುದು ಎನ್ನಲಾಗಿದೆ. 2ನೇ ಟೆಸ್ಟ್‌ಗೆ ವಿಶ್ರಾಂತಿ ಪಡೆದಿದ್ದ ಜಸ್ಪ್ರೀತ್ ಬುಮ್ರಾ 3ನೇ ಪಂದ್ಯಕ್ಕೆ ಮರಳುವ ಸಾಧ್ಯತೆ ಬಹಳ ಜಾಸ್ತಿ. ನಿತೀಶ್ ರೆಡ್ಡಿ ಬದಲಿಗೆ ಅರ್ಶದೀಪ್ ಸಿಂಗ್ ಅಥವಾ ಕುಲ್ದೀಪ್ ಯಾದವ್ ತಂಡ ಸೇರ್ಪಡೆಗೊಳ್ಳಬಹುದು. ಕರುಣ್ ನಾಯಕ‌ ಫಾರ್ಮ್ ಕೊರತೆಯಿಂದಾಗಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ.

ಮುಂದಿನ ಪಂದ್ಯಗಳ ವೇಳಾಪಟ್ಟಿ:
ನಾಲ್ಕನೇ ಟೆಸ್ಟ್ ಜುಲೈ 23ರಿಂದ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿದ್ದು, ಐದನೇ ಹಾಗೂ ಕೊನೆ ಗೆಲುವಿನ ಟೆಸ್ಟ್ ಜುಲೈ 31ರಿಂದ ಲಂಡನ್‌ನ ಓವಲ್‌ನಲ್ಲಿ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!