ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ 2026ರ ಸೂಪರ್-8 ಹಂತದ ಮೂರನೇ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಫೆಬ್ರವರಿ 22ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಎದುರಾಗಲಿವೆ. ಈ ಪಂದ್ಯ ಮೊರ್ಕೆಲ್ ಕುಟುಂಬದಲ್ಲಿ ವಿಶೇಷ ಕುತೂಹಲ ಹುಟ್ಟಿಸಿದೆ.
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗರಾದ ಅಲ್ಬಿ ಮೊರ್ಕೆಲ್ ಮತ್ತು ಮೋರ್ನೆ ಮೊರ್ಕೆಲ್ ಇಂದಿನ ಪಂದ್ಯದಲ್ಲಿ ವಿರುದ್ಧ ಪಾಳಯಗಳ ಕೋಚಿಂಗ್ ಸಿಬ್ಬಂದಿಯಾಗಿದ್ದಾರೆ. ಅಲ್ಬಿ ದಕ್ಷಿಣ ಆಫ್ರಿಕಾ ತಂಡದ ಸಲಹೆಗಾರರಾಗಿದ್ದರೆ, ಮೋರ್ನೆ ಭಾರತೀಯ ತಂಡದ ಬೌಲಿಂಗ್ ಕೋಚ್ ಆಗಿದ್ದಾರೆ.
ಇದನ್ನೂ ಓದಿ:
ಇದರಿಂದ ತಾಯಿ ಮರಿಯಾನಾ ಮೊರ್ಕೆಲ್ ಯಾರಿಗೆ ಬೆಂಬಲ ನೀಡಬೇಕು ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ ಎಂದು ಮೋರ್ನೆ ಹಾಸ್ಯಾತ್ಮಕವಾಗಿ ಹೇಳಿದ್ದಾರೆ. “ನಾವು ಗೆಲುವಿನ ಬಗ್ಗೆ ಯೋಚಿಸುತ್ತಿದ್ದರೆ, ನಮ್ಮ ತಾಯಿ ಯಾರನ್ನು ಬೆಂಬಲಿಸಬೇಕು ಎಂಬ ಚಿಂತೆಯಲ್ಲಿ ಇದ್ದಾರೆ” ಎಂದಿದ್ದಾರೆ.
ಭಾರತ ಗೆದ್ದರೆ ಮೋರ್ನೆ ಖುಷಿಯಾಗಲಿದ್ದು, ದಕ್ಷಿಣ ಆಫ್ರಿಕಾ ಜಯಿಸಿದರೆ ಅಲ್ಬಿ ಸಂತೋಷಪಡಲಿದ್ದಾರೆ. ಹೀಗಾಗಿ ಈ ಪಂದ್ಯ ಕೇವಲ ತಂಡಗಳ ನಡುವೆ ಮಾತ್ರವಲ್ಲ, ಸಹೋದರರ ನಡುವೆ ನಡೆಯುವ ಸವಾಲಾಗಿ ಮಾರ್ಪಟ್ಟಿದೆ.



