September 3, 2026
Thursday, September 3, 2026
spot_img

IND vs ZIM: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ: ಕ್ಲೀನ್ ಸ್ವೀಪ್‌ಗೆ ಶ್ರೇಯಸ್ ಅಯ್ಯರ್ ಪಡೆ ಸಜ್ಜು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಚೊಚ್ಚಲ ಟಿ20 ಸರಣಿಯ ಅಂತಿಮ ಹಣಾಹಣಿಯಲ್ಲಿ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಹರಾರೆಯ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಬೃಹತ್ ಮೊತ್ತ ಕಟ್ಟಿ ಎದುರಾಳಿಗೆ ಸವಾಲೆಸೆಯುವುದು ಭಾರತದ ಪ್ರಮುಖ ತಂತ್ರವಾಗಿದೆ.

2-0 ಮುನ್ನಡೆಯೊಂದಿಗೆ ಸರಣಿ ಭಾರತದ ವಶ

ಶನಿವಾರ ನಡೆದ ದ್ವಿತೀಯ ಟಿ20 ಕಾದಾಟದಲ್ಲಿ ಆಲ್ ರೌಂಡ್ ಪ್ರದರ್ಶನ ನೀಡಿದ್ದ ಭಾರತೀಯ ಪಡೆ ಜಿಂಬಾಬ್ವೆಯನ್ನು ಮಣಿಸಿ 2-0 ಅಂತರದಿಂದ ಸರಣಿಯನ್ನು ಈಗಾಗಲೇ ತನ್ನದಾಗಿಸಿಕೊಂಡಿದೆ. ನಾಯಕನಾಗಿ ಶ್ರೇಯಸ್ ಅಯ್ಯರ್ ಅವರಿಗೆ ಇದು ಚೊಚ್ಚಲ ಸರಣಿ ಗೆಲುವಾಗಿದ್ದು, ಕೊನೆಯ ಪಂದ್ಯವನ್ನೂ ಗೆದ್ದು ಕ್ಲೀನ್ ಸ್ವೀಪ್ ಸಾದಿಸುವತ್ತ ಚಿತ್ತ ನೆಟ್ಟಿದ್ದಾರೆ.

ಅಂತಿಮ ಪಂದ್ಯದಲ್ಲೂ ಗೆಲುವಿನ ಲಯ ಕಾಯ್ದುಕೊಳ್ಳುವ ಗುರಿ

ಮೊದಲೆರಡು ಪಂದ್ಯಗಳಲ್ಲಿ ಯುವ ಆಟಗಾರರ ಸಮ್ಮಿಶ್ರಣದೊಂದಿಗೆ ಪ್ರಾಬಲ್ಯ ಮೆರೆದಿರುವ ಭಾರತ, ಅಂತಿಮ ಪಂದ್ಯದಲ್ಲೂ ಅದೇ ಗೆಲುವಿನ ಓಟವನ್ನು ಮುಂದುವರಿಸಲು ಸಜ್ಜಾಗಿದೆ. ಜಿಂಬಾಬ್ವೆ ತಂಡವು ತವರಿನಲ್ಲಿ ಸಮಾಧಾನಕರ ಗೆಲುವು ದಾಖಲಿಸಲು ಹೆಣಗಾಡುತ್ತಿದ್ದರೆ, ಪ್ರವಾಸಿ ಭಾರತ ತಂಡವು ಪೂರ್ಣ ಸರಣಿಯಲ್ಲಿ ಸೌಂಡ್ ಮಾಡಲು ಸಿದ್ಧವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !