ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾನುವಾರ ಟಿ 20 ವಿಶ್ವಕಪ್ ನಲ್ಲಿ ಭಾರತಕ್ಕೆ ಮಹತ್ವದ ದಿನ. ನಾಳೆ ರೋಹಿತ್ ಶರ್ಮಾ ಬಳಗ ಸೆಮಿಫೈನಲ್ ಪ್ರವೇಶಕ್ಕೆ ಮೆಲ್ಬೋರ್ನ್ ಮೈದಾನದಲ್ಲಿ ಜಿಂಬಾಬ್ವೆ ವಿರುದ್ಧ ಸೆಣಸಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮಂತ್ರದೊಂದಿಗೆ ರೋಹಿತ್ ಬಳಗ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತ ನಿರಾಯಾಸವಾಗಿ ಸೆಮಿಫೈನಲ್ ನಲ್ಲಿ ಸ್ಥಾನ ಸಂಪಾದಿಸಲಿದೆ.
ಗುಂಪು 2 ರಲ್ಲಿ ಟೀಂ ಇಂಡಿಯಾ 6 ಅಂಕಗಳೊಂದಿಗೆ ಅಗ್ರಸ್ಥಾನ ಕಾಪಾಡಿಕೊಂಡಿದೆ. ಆದರೆ ಸೆಮೀಸ್ ಸ್ಥಾನ ಮಾತ್ರ ಇನ್ನೂ ನಿಶ್ಚಿತವಿಲ್ಲ. 5 ಅಂಕಗಳಿಸಿರುವ ದಕ್ಷಿಣ ಆಫ್ರಿಕಾ ದ್ವಿತೀಯ ಸ್ಥಾನದಲ್ಲಿದೆ. ಪಾಕಿಸ್ತಾನ 4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಭಾನುವಾರ ಈ ಮೂರೂ ತಂಡಗಳು ಮೈದಾನದಲ್ಲಿ ಕಾಣಿಸಿಕೊಳ್ಳಬೇಕಿದೆ. ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ನಡುವೆ ನಡೆಯಲಿರುವ ದಿನದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆದ್ದರೆ ಅದು ಸೆಮಿಫೈನಲ್ ತಲುಪಲಿದೆ. ದಿನದ ಎರಡನೇ ಪಂದ್ಯವು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿದೆ. ಈ ಪಂದ್ಯವನ್ನು ಪಾಕ್ ಗೆದ್ದರೆ ಸೆಮೀಸ್ ರೇಸ್ ನಲ್ಲಿ ಉಳಿದುಕೊಳ್ಳಲಿದೆ. ಹೀಗಾದಲ್ಲಿ ಭಾರತ ಜಿಂಬಾಂಬ್ವೆ ವಿರುದ್ಧ ಉತ್ತಮ ಅಂತರದಲ್ಲಿ ಗೆಲ್ಲಬೇಕು. ಏಕೆಂದರೆ ಪಾಕ್ ಭಾರತಕ್ಕಿಂತ ರನ್ ರೇಟ್ ನಲ್ಲಿ ಮುಂದಿದೆ. ಭಾರತ ಮತ್ತು ಜಿಂಬಾಬ್ವೆ ಪಂದ್ಯದ ನೇರಪ್ರಸಾರ ಭಾರತೀಯ ಕಾಲಮಾನ 7 ಗಂಟೆಗೆ ಪ್ರಾರಂಭವಾಗಲಿದೆ. ಹಾಗೆಯೇ ಪಂದ್ಯದ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ಗಳು ಹಾಗೂ ಡಿಸ್ನಿ ಪ್ಲೆಸ್ ಹಾಟ್ ಸ್ಟಾರ್ ನಲ್ಲಿ ಇರಲಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ