September 3, 2026
Thursday, September 3, 2026
spot_img

IND vs ZIM: ಟಾಸ್ ಗೆದ್ದ ಜಿಂಬಾಬ್ವೆ ಫೀಲ್ಡಿಂಗ್ ಆಯ್ಕೆ, ಅಯ್ಯರ್ ಪಡೆಗೆ ಬ್ಯಾಟಿಂಗ್ ಸವಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಜಿಂಬಾಬ್ವೆ ನಡುವಿನ ಚುಟುಕು ಸಮರದ ಎರಡನೇ ಟಿ20 ಪಂದ್ಯ ಇಂದು ನಡೆಯುತ್ತಿದ್ದು, ಟಾಸ್ ಗೆದ್ದ ಜಿಂಬಾಬ್ವೆ ತಂಡದ ನಾಯಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಪರಿಣಾಮವಾಗಿ, ನಾಯಕ ಶ್ರೇಯಸ್ ಐಯ್ಯರ್ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಮೊದಲು ಬ್ಯಾಟ್ ಬೀಸುವ ಅವಕಾಶ ಪಡೆದಿದೆ.

ಮೊದಲ ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಶ್ರೇಯಸ್ ಪಡೆ

ಮೂರು ಪಂದ್ಯಗಳ ಈ ಸರಣಿಯಲ್ಲಿ ಭಾರತ ಈಗಾಗಲೇ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಈ ನಿರ್ಣಾಯಕ ಪಂದ್ಯವನ್ನು ಜಯಿಸುವ ಮೂಲಕ ‘ಮೆನ್ ಇನ್ ಬ್ಲೂ’ ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವ ಸನ್ನಾಹದಲ್ಲಿದೆ. ಹಿಂದೆ ಐರ್ಲೆಂಡ್ (0-2) ಹಾಗೂ ಇಂಗ್ಲೆಂಡ್ (0-4) ವಿರುದ್ಧದ ಸರಣಿಗಳಲ್ಲಿ ಸೋಲು ಕಂಡಿದ್ದ ಶ್ರೇಯಸ್ ಐಯ್ಯರ್, ಈ ಪಂದ್ಯವನ್ನು ಗೆದ್ದು ನಾಯಕನಾಗಿ ತಮ್ಮ ಚೊಚ್ಚಲ ಸರಣಿ ಜಯದ ಸಿಹಿ ಉಣ್ಣಲು ಕಾಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !