January16, 2026
Friday, January 16, 2026
spot_img

ಡಿಸೆಂಬರ್‌ನಲ್ಲಿ IND W vs SL W T20 ಸಮರ: ವಿಶ್ವಕಪ್ ಬಳಿಕ ಮೊದಲ ಅಂತಾರಾಷ್ಟ್ರೀಯ ಸವಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಕಪ್ ವಿಜಯದ ಸಂಭ್ರಮ ಇನ್ನೂ ನೆನಪಿರುವ ನಡುವೆಯೇ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಮತ್ತೊಂದು ಮಹತ್ವದ ಸವಾಲು ಎದುರಾಗುತ್ತಿದೆ. ಡಿಸೆಂಬರ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಐದು ಪಂದ್ಯಗಳ ಮಹಿಳಾ ಟಿ20 ಸರಣಿ ನಡೆಯಲಿದ್ದು, ಈ ಮೂಲಕ ತಂಡವು ಏಕದಿನ ವಿಶ್ವಕಪ್ ಬಳಿಕ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕಣಕ್ಕಿಳಿಯಲಿದೆ. BCCI ಪ್ರಕಟಿಸಿರುವ ವೇಳಾಪಟ್ಟಿಯಂತೆ ಡಿಸೆಂಬರ್ 21ರಂದು ವಿಶಾಖಪಟ್ಟಣದಲ್ಲಿ ಸರಣಿ ಆರಂಭವಾಗಲಿದೆ.

ಡಿಸೆಂಬರ್ 21ರಿಂದ ಟಿ20 ಸರಣಿ ಆರಂಭವಾಗಲಿದ್ದು, ಮೊದಲ ಎರಡು ಪಂದ್ಯಗಳು ವಿಶಾಖಪಟ್ಟಣದಲ್ಲಿ ನಡೆಯಲಿವೆ. ಉಳಿದ ಮೂರು ಪಂದ್ಯಗಳು ತಿರುವನಂತಪುರದಲ್ಲಿ ನಡೆಯಲಿವೆ. ಇದುವರೆಗಿನ ಮುಖಾಮುಖಿ ದಾಖಲೆಯಲ್ಲಿ ಭಾರತೀಯ ತಂಡವೇ ಮೇಲುಗೈ ಸಾಧಿಸಿದ್ದು, 26 ಪಂದ್ಯಗಳಲ್ಲಿ 20 ಗೆಲುವು ಗಳಿಸಿದೆ. ಈ ದಾಖಲೆ ಸರಣಿಯಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಸೂಚಕವಾಗಿದ್ದು, ಮತ್ತೊಂದು ಸರಣಿ ಜಯದ ನಿರೀಕ್ಷೆಯನ್ನು ಮತ್ತಷ್ಟು ಬಲಪಡಿಸಿದೆ.

ಈ ನಡುವೆ ಉಪನಾಯಕಿ ಸ್ಮೃತಿ ಮಂಧಾನ ಈ ಸರಣಿಯಲ್ಲಿ ಭಾಗವಹಿಸುವರೋ ಇಲ್ಲವೋ ಎಂಬುದರ ಬಗ್ಗೆ ಸಂಶಯಗಳು ಮೂಡಿವೆ. ವೈಯಕ್ತಿಕ ಕಾರಣಗಳಿಂದ ಕಳೆದ ತಿಂಗಳು ಅವರ ಮದುವೆ ಮುಂದೂಡಲ್ಪಟ್ಟಿದ್ದು, ತಂದೆಯ ಆರೋಗ್ಯದ ಕಾರಣ ಅವರು ತಂಡದ ಆಯ್ಕೆ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ ಎನ್ನಲಾಗಿದೆ.

Must Read

error: Content is protected !!