ಸ್ವಾತಂತ್ರ್ಯ ಅಮೃತ ಮಹೋತ್ಸವ: ಮೈಸೂರಿನಲ್ಲಿ 35 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಬೃಹತ್ ಮೆರವಣಿಗೆ

ಹೊಸದಿಗಂತ ವರದಿ,ಮೈಸೂರು :

ಮೈಸೂರಿನಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸುಮಾರು ೩೦೦ಕ್ಕೂ ಅಧಿಕ ಶಾಲಾ ಕಾಲೇಜು 35ಸಾವಿರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಅರಮನೆ ಮೈದಾನದಿಂದ ಭೂತಾಳೆ ಮೈದಾನದವರೆಗೆ ಪ್ರಭಾತ್ ಫೇರಿ (ಬೃಹತ್ ಮರವಣಿಗೆ)ಯನ್ನು ಶುಕ್ರವಾರ ನಡೆಸಿದರು.
ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ದಕ್ಷಿಣ ದ್ವಾರವಾದ ವರಹಾ ದ್ವಾರದಿಂದ ರಾಷ್ಟ್ರಧ್ವಜವನ್ನು ಹಿಡಿದು, ವಿವಿಧ ಘೋಷಣೆಗಳನ್ನು, ವಾಕ್ಯಗಳನ್ನು ಬರೆದಿದ್ದ ಭಿತ್ತಿ ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಹೊರಟ ಸಾವಿರಾರು ಮಂದಿ ವಿದ್ಯಾರ್ಥಿಗಳು ರಾಮಾನುಜ ರಸ್ತೆ ಮಾರ್ಗವಾಗಿ ಅಗ್ರಹಾರ ವೃತ್ತ, ಸಿದ್ದಪ್ಪ ಸ್ಕ್ವೆರ್ ವೃತ್ತದ ಮೂಲಕ ನಂಜುಮಳಿಗೆ, ಚಾಮುಂಡಿಪುರ ವೃತ್ತ, ಮಾರ್ಗವಾಗಿ ವಿದ್ಯಾರಣ್ಯಪುರಂನ ಭೂತಾಳೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೆರಳಿದರು.
ಮೆರವಣಿಗೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವೇಷ, ಭೂಷಣಗಳನ್ನು ಧರಿಸಿದ್ದ ವಿದ್ಯಾರ್ಥಿಗಳು ಸಾರ್ವಜನಿಕರ ಗಮನವನ್ನು ಸೆಳೆದರು.
ಭೂತಾಳೆ ಮೈದಾನದಲ್ಲಿ ನಡೆದ ಪ್ರಭಾತ್ ಫೇರಿ ಸಮಾರೋಪ ಸಮಾರಂಭದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ೫೦ ವರ್ಷದಷ್ಟು ಹಳೆಯದಾದ ರಾಷ್ಟçಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿ, ಪ್ರತಿಯೊಬ್ಬರ ಕೈಯಲ್ಲಿ ರಾಷ್ಟçಧ್ವಜ ಹಿಡಿದು ದೇಶಾಭಿಮಾನ ಮೆರೆಯುತ್ತಿರುವುದನ್ನು ನೋಡಿದರೆ, ಈ ದೇಶಕ್ಕೆ ಮುಂದೆ ಉತ್ತಮ ಭವಿಷ್ಯವಿದೆ. ಮಕ್ಕಳಲ್ಲಿ ರಾಷ್ಟ್ರಾಭಿಮಾನ ಅರಳಿದೆ. ಹಾಗಾಗಿ ಮುಂದೆ ಭಾರತ ಇಡೀ ವಿಶ್ವಕ್ಕೆ ವಿಶ್ವಗುರು ಆಗಲಿದೆ ಎಂದರು.
ಈ ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಮಂದಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ತ್ಯಾಗ, ಬಲಿದಾನ ಮಾಡಿದ್ದಾರೆ. ಅವರೆಲ್ಲರ ಆಸೆ, ಮುಂದಿನ ಯುವ ಪೀಳಿಗೆ ಸ್ವಾಭಿಮಾನ, ಸ್ವಾವಲಂಭನೆಯಿoದ ಬದುಕಬೇಕು ಎಂದು ಕನಸ್ಸು ಕಂಡಿದ್ದರು. ಲಕ್ಷಾಂತರ ಮಂದಿ ತಮ್ಮ ಪ್ರಾಣ ತ್ಯಾಗ ಮಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಆದರೆ ಪಠ್ಯ ಪುಸ್ತಕಗಳಲ್ಲಿ ನಿಜವಾದ ಇತಿಹಾಸ, ಸ್ವಾತಂತ್ರ್ಯ ಹೋರಾಟವನ್ನು ಇಲ್ಲಿಯ ತನಕ ಹೇಳಿಲ್ಲ. ಆದರೆ ನಾವು ಸತ್ಯವನ್ನು ಹೇಳಲು ನಿಜವಾದ ಇತಿಹಾಸ, ಸ್ವಾತಂತ್ರ್ಯ ಹೋರಾಟವನ್ನು ಪಠ್ಯ ಪುಸ್ತಕದಲ್ಲಿ ತರಲು ಹೋದಾಗ, ಅದಕ್ಕೆ ರಾಜಕೀಯ ಬಣ್ಣ ಕಟ್ಟಿ, ವಿರೋಧ ವ್ಯಕ್ತಪಡಿಸಲಾಯಿತು. ಆದರೆ ಮುಂದಿನ ದಿನಗಳಲ್ಲಿ ನಾವು ಇತಿಹಾಸದ ಸತ್ಯವನ್ನು ಪಠ್ಯದಲ್ಲಿ ಜಾರಿಗೆ ತರುತ್ತೇವೆ. ನೂತನ ಶಿಕ್ಷಣ ನೀತಿ ಜಾರಿಯಿಂದ ಸ್ವಾವಲಂಭಿ, ಸ್ವಾಭಿಮಾನದ ಬದುಕನ್ನು ನೀಡುತ್ತೇವೆ ಎಂದು ತಿಳಿಸಿದರು.
ಮುಖ್ಯ ಭಾಷಣ ಮಾಡಿದರಾಷ್ಟ್ರಿಯ ವಿಚಾರವಾದಿ ಪ್ರಕಾಶ್ ಮಲ್ಪೆ, ಭಾರತವನ್ನು ನೋಡಿದರೆ, ಇಡೀ ಜಗತ್ತನ್ನೇ ಒಂದೇ ದೇಶದಲ್ಲಿ ನೋಡಿದಂತಾಗುತ್ತದೆ. ಈ ದೇಶದಲ್ಲಿರುವಷ್ಟು ನದಿಗಳು, ಸರೋವರಗಳು, ಬೆಟ್ಟ ಗುಡ್ಡಗಳು, ಅರಣ್ಯ ಪ್ರದೇಶಗಳು, ಪ್ರಕೃತಿ, ಮರುಭೂಮಿ ಇಡೀ ಭೂಮಂಡಲದಲ್ಲಿ ಬೇರೆಲ್ಲೂ ಇಲ್ಲ. ದೇವರು ತನ್ನ ಅವತಾರವನ್ನು ಎತ್ತಲು,ಲೀಲಾ ವಿನೋದಗಳನ್ನು ಆಡಲೆಂದು ಭಾರತವನ್ನೇ ಸೃಷ್ಠಿಸಿ, ಆಯ್ಕೆ ಮಾಡಿಕೊಂಡಿದ್ದಾನೆ. ಇಂತಹ ನೆಲದಲ್ಲಿ ಜನಸಿದ ಪ್ರತಿಯೊಬ್ಬರು ಧನ್ಯರು, ಪುಣ್ಯವಂತರು ಎಂದು ಹೇಳಿದರು.
ಸ್ವಾತಂತ್ರ್ಯಕ್ಕಾಗಿ ಭಾರತ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು ಕೇವಲ ೧೯೦ ವರ್ಷಗಳು ಮಾತ್ರ. ಆದರೆ ಕ್ರಿ.ಶ ೬ ನೇ ಶತಮಾನದಿಂದಲೂ ನಮ್ಮ ದೇಶದ ಜನರು ಪರಕೀಯರ ದಾಳಿ, ಆಕ್ರಮಣದ ವಿರುದ್ಧ ಹೋರಾಟವನ್ನು ನಡೆಸಿ, ಹಿಮ್ಮೆಟ್ಟಿಸಿಕೊಂಡು, ನಮ್ಮ ದೇಶವನ್ನು ರಕ್ಷಣೆ ಮಾಡಿ, ನಮ್ಮತನವನ್ನು ಕಾಯ್ದುಕೊಂಡು ಬಂದಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಗಡಿಯಲ್ಲಿ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಮ್ಮ ದೇಶದ ರಕ್ಷಣೆ ಮಾಡುತ್ತಿದ್ದಾರೆ. ನೆಮ್ಮಲ್ಲರ ಹಿತರಕ್ಷಣೆ ಮಾಡುತ್ತಿದ್ದಾರೆ. ಹಾಗಾಗಿ ನಾವೆಲ್ಲರೂ ನಾಡಿನಲ್ಲಿರುವ ಸೈನಿಕರಾಗಬೇಕು. ಆ ಭಾವನೆ ಬರಬೇಕು. ಮಹಾಪುರುಷರ ರೀತಿ ಪ್ರತಿಯೊಬ್ಬರಾಗಬೇಕು. ಆಗ ಭಾರತ ವಿಶ್ವಗುರುವಾಗುತ್ತದೆ ಎಂದು ತಿಳಿಸಿದರು.
ಶಾಸಕ ಎಸ್.ಎ.ರಾಮದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!