ಭಾರತ-ಚೀನಾ ಎರಡೂ ಏಷ್ಯಾದ ಡಬಲ್ ಎಂಜಿನ್​ಗಳು: ಟ್ರಂಪ್ ಸುಂಕದ ವಿರುದ್ಧ ಡ್ರ್ಯಾಗನ್ ಕಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ವಿರುದ್ಧ ಅಮೆರಿಕ (US Tariff) ಹೇರಿರುವ ಹೆಚ್ಚುವರಿ ಸುಂಕವನ್ನು ವಿರೋಧಿಸುವ ಮೂಲಕ ಚೀನಾ ಭಾರತಕ್ಕೆ ಬಹಿರಂಗವಾಗಿ ಬೆಂಬಲ ನೀಡಿದೆ.

ಅಮೆರಿಕವನ್ನು Bully (ದಬ್ಬಾಳಿಕೆ ಮಾಡುವವ) ಎಂದು ಕರೆದಿರುವ ಭಾರತದ ಚೀನಾ ರಾಯಭಾರಿ ಕ್ಸು ಫೀಹಾಂಗ್, ಮುಕ್ತ ವ್ಯಾಪಾರದಿಂದ ಧೀರ್ಘ ಕಾಲ ಲಾಭ ಪಡೆದ ಯುಎಸ್, ಈಗ ಸುಂಕಗಳನ್ನು ಚೌಕಾಸಿ ಅಸ್ತ್ರಗಳಾಗಿ ಬಳಸುತ್ತಿದೆ ಎಂದು ಟೀಕಿಸಿದೆ.

ಭಾರತದ ಮೇಲೆ ಶೇ. 50 ರಷ್ಟು ಸುಂಕ ವಿಧಿಸುವ ಅಮೆರಿಕದ ಕ್ರಮವನ್ನು ಚೀನಾ ದೃಢವಾಗಿ ವಿರೋಧಿಸುವುದಾಗಿ ತಿಳಿಸಿದ್ದಾರೆ. ಮೌನವಾದಷ್ಟು Bully (ಅಮೆರಿಕ) ಮತ್ತಷ್ಟು ದಬ್ಬಾಳಿಕೆ ಮಾಡುತ್ತದೆ. ಭಾರತ ಮತ್ತು ಚೀನಾ ಏಷ್ಯಾದ ಡಬಲ್ ಎಂಜಿನ್ ಗಳಾಗಿದ್ದು, ಭಾರತದೊಂದಿಗೆ ಚೀನಾ ದೃಢವಾಗಿ ನಿಲ್ಲುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದೇ ವೇಳೆ ಭಾರತೀಯ ಸರಕುಗಳಿಗೆ ಚೀನಾದ ಮಾರುಕಟ್ಟೆ ತೆರೆಯುವ ಕುರಿತು ಮಾತನಾಡಿದ ಫೀಹಾಂಗ್, ಪರಸ್ಪರ ಮಾರುಕಟ್ಟೆಯಲ್ಲಿ ಸರಕುಗಳ ವಿನಿಮಯದಿಂದ ಎರಡೂ ದೇಶಗಳು ಸಾಕಷ್ಟು ಪ್ರಗತಿ ಸಾಧಿಸಬಹುದು ಎಂದು ಹೇಳಿದರು.

ಭಾರತವು ಐಟಿ, ಸಾಫ್ಟ್‌ವೇರ್ ಮತ್ತು ಬಯೋಮೆಡಿಸಿನ್‌ನಲ್ಲಿ ಸ್ಪರ್ಧೆ ನೀಡುತ್ತಿದ್ದರೆ, ಚೀನಿಯರು ಎಲೆಕ್ಟ್ರಾನಿಕ್ ಉತ್ಪಾದನೆ, ಮೂಲಸೌಕರ್ಯ ನಿರ್ಮಾಣ ಮತ್ತು ಇಂಧನ ಕ್ಷೇತ್ರದಲ್ಲಿ ವ್ಯಾಪಕ ವಿಸ್ತರಣೆಗೆ ಎದುರು ನೋಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಎರಡು ಪ್ರಮುಖ ಮಾರುಕಟ್ಟೆಗಳು ಒಂದುಗೂಡಿದರೆ ದೊಡ್ಡದಾರ ಪರಿಣಾಮವನ್ನು ಉಂಟುಮಾಡುತ್ತವೆ. ಭಾರತ ಹೂಡಿಕೆ ಮಾಡಲು ಚೀನಾ ಬಯಸುತ್ತದೆ. ಅಂತೆಯೇ ಭಾರತದಲ್ಲಿ ಚೀನೀ ವ್ಯವಹಾರಗಳಿಗೆ ನ್ಯಾಯಯುತ ವಾತಾವರಣವನ್ನು ನಿರೀಕ್ಷಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!