ಆಸ್ಟ್ರೇಲಿಯಾ ಪಿಎಂ ಇಲೆವೆನ್ ವಿರುದ್ಧ ಗೆದ್ದ ಬೀಗಿದ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್‌ಗೂ ಮುನ್ನ ಪ್ರೈಮ್ ಮಿನಿಸ್ಟರ್ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ.

ಶುಭ್ಮನ್ ಗಿಲ್ (62 ಎಸೆತಗಳಲ್ಲಿ 7 ಬೌಂಡರಿ ಸಹಿತ 50) ಅರ್ಧಶತಕ ಸಿಡಿಸಿ ಮಿಂಚಿದರು. ಇವರಿಗೆ ಸಾಥ್ ನೀಡಿದ ನಿತೀಶ್ ಕುಮಾರ್ ರೆಡ್ಡಿ (42), ವಾಷಿಂಗ್ಟನ್ ಸುಂದರ್ (45) ಉತ್ತಮವಾಗಿ ಬ್ಯಾಟಿಂಗ್ ಮಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಎರಡು ದಿನಗಳ ಪಂದ್ಯದ ಮೊದಲ ದಿನ ಮಳೆಗೆ ಕೊಚ್ಚಿ ಹೋಗಿತ್ತು. ರಡನೇ ದಿನವಾದ ಭಾನುವಾರ ಮಳೆ ಕೊರತೆಯಿಂದ 50 ಓವರ್ ಗಳಲ್ಲಿ ಪಂದ್ಯ ಆಡಲು ಎರಡೂ ತಂಡಗಳು ಒಪ್ಪಿಗೆ ಸೂಚಿಸಿದವು.

ಆದರೆ ಇಂದು ಮಳೆಯಾದ ಕಾರಣ 50 ಓವರ್​ಗಳ ಬದಲಾಗಿ 46 ಓವರ್​ಗಳಿಗೆ ಪಂದ್ಯವನ್ನ ಸೀಮಿತಗೊಳಿಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಪ್ರೈಮ್ ಮಿನಿಸ್ಟರ್ ಇಲೆವೆನ್ ಹರ್ಷಿತ್ ರಾಣಾ ಬೌಲಿಂಗ್ ದಾಳಿಗೆ ಸಿಲುಕಿ 240 ರನ್​ಗಳಿಗೆ ಆಲೌಟ್ ಆಯಿತು.

ಆರಂಭಿಕರಾದ ಸ್ಯಾಮ್ ಕಾನ್ಸ್ಟಾಸ್ ಶತಕ ಸಿಡಿಸಿ ಮಿಂಚಿದರು. ಇವರಿಗೆ ಸಾಥ್ ನೀಡಿದ ಹ್ಯಾನೋ ಜೇಕಬ್ಸ್ 60 ಎಸೆತಗಳಲ್ಲಿ 4 ಬೌಂಡರಿ ಸಹಿತ 61 ರನ್​ ಗಳಿಸಿದರು.

ಭಾರತದ ಬೌಲರ್‌ಗಳಲ್ಲಿ ಹರ್ಷಿತ್ ರಾಣಾ 44 ಕ್ಕೆ 4, ಆಕಾಶ್ ದೀಪ್ 58ಕ್ಕೆ2 ಎರಡು ವಿಕೆಟ್ ಪಡೆದು ಮಿಂಚಿದರು. ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ಹಾಗೂ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.

ಬಳಿಕ ಭಾರತ 46 ಓವರ್ ಗಳಲ್ಲಿ 5 ವಿಕೆಟ್ ಗೆ 257 ರನ್ ಗಳಿಸಿ ಜಯಭೇರಿ ಬಾರಿಸಿತು. ಆರಂಭಿಕರಾಗಿ ಕಣಕ್ಕಿಳಿದ ಜೈಸ್ವಾಲ್ 59 ಎಸೆತಗಳಲ್ಲಿ 9 ಬೌಂಡರಿ ಸಹಿತ 45 ರನ್​ಗಳಿಸಿ ಔಟಾದರೆ, ಕೆಎಲ್ ರಾಹುಲ್ 44 ಎಸೆತಗಳಲ್ಲಿ 4 ಬೌಂಡರಿ ಸಹಿತ 27 ರನ್​ಹಾಗೂ ಶುಭ್ಮನ್ ಗಿಲ್​ 62 ಎಸೆತಗಳಲ್ಲಿ 7 ಬೌಂಡರಿ ಸಹಿತ 50 ರನ್​ಗಳಿಸಿ ರಿಟೈರ್ಡ್ ಹರ್ಟ್ ಆದರು. ನಾಯಕ ರೋಹಿತ್ ಶರ್ಮಾ 3 ರನ್​, ಸರ್ಫರಾಜ್ ಖಾನ್ (1) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.

ರವೀಂದ್ರ ಜಡೇಜಾ 27 ರನ್​ಗಳಿಸಿದರೆ, ವಾಷಿಂಗ್ಟನ್ ಸುಂದರ್​ 36 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯ 42 ರನ್​ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಈ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರಿಷಬ್ ಪಂತ್ ಮತ್ತು ಧ್ರುವ್ ಜುರೆಲ್ ಬ್ಯಾಟಿಂಗ್​ಗೆ ಆಗಮಿಸಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!