ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತ ಉಕ್ರೇನ್-ರಷ್ಯಾ ಸಂಘರ್ಷವನ್ನು ವಿರೋಧಿಸುತ್ತದೆ. ಬುಚಾ ನಗರದಲ್ಲಿ ನಡೆಯುತ್ತಿರುವ ದಾಳಿ, ಸರಣಿ ಸಾವನ್ನು ಭಾರತದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಖಂಡಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ಬುಚಾದಲ್ಲಿ ನಡೆದಂತಹ ನಾಗರಿಕ ಹತ್ಯೆಯ ಬಗ್ಗೆ ಸ್ವತಂತ್ರ ತನಿಖೆಯಾಗಲಿ. ಮುಗ್ಧ ಜೀವಗಳ ಬಲಿ ಪಡೆಯುವುದನ್ನು ನಿಲ್ಲಿಸಲು, ಯುದ್ಧವನ್ನು ಅಂತ್ಯಗೊಳಿಸುವುದು ಬಿಟ್ಟು ಬೇರೆ ಮಾರ್ಗವಿಲ್ಲ ಹೇಳಿದರು
ರಷ್ಯಾ ಮತ್ತು ಉಕ್ರೇನ್ ನಡುವಿನ ಮಾತುಕತೆಯನ್ನು ನಾವು ಪ್ರೋತ್ಸಾಹಿಸುತ್ತೇವೆ. ತಕ್ಷಣವೇ ಯುದ್ಧ ನಿಲ್ಲಬೇಕು. ಈ ವಿಚಾರದಲ್ಲಿ ಭಾರತ ಯಾವುದೇ ರೀತಿಯ ಸಹಾಯ ಮಾಡಲು ಸಿದ್ಧ. ಇದನ್ನು ರಷ್ಯಾದ ವಿದೇಶಾಂಗ ಇಲಾಖೆ ಸಚಿವ ಲಾರ್ವೋವ್ ಭಾರತಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಕೂಡ ಹೇಳಲಾಗಿದೆ ಎಂದು ಜೈಶಂಕರ್ ತಿಳಿಸಿದರು.
ಉಕ್ರೇನ್ ನಗರದ ಬುಚಾದಲ್ಲಿ ನಡೆದ ನಾಗರಿಕ ಹತ್ಯೆಗಳ ಕುರಿತು ಮಾತನಾಡಿದ ಜೈಶಂಕರ್, ವರದಿಗಳನ್ನು ನೋಡಿ ಭಾರತವು ವಿಚಲಿತವಾಗಿದೆ. ಅಲ್ಲಿ ನಡೆದಿರುವ ಹತ್ಯೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ ಮತ್ತು ಸ್ವತಂತ್ರ ತನಿಖೆಯ ಕರೆಗೆ ನಾವು ಬೆಂಬಲಿಸುತ್ತೇವೆ ಎಂದು ಅವರು ಹೇಳಿದರು.
ಇನ್ನು ಉಕ್ರೇನ್ ಪರಿಸ್ಥಿತಿಗೆ ಸಂಬಂಧಿಸಿದಂತೆ ಭಾರತದ ಕ್ರಮಗಳಿಗೆ ರಾಜಕೀಯ ಬಣ್ಣ ನೀಡುವುದು ದುರದೃಷ್ಟಕರ ಒಂದು ವೇಳೆ ಭಾರತವು ಒಂದು ಕಡೆಯವರಿಗೆ ಬೆಂಬಲಿಸಿದ್ರೆ, ಅದು ಶಾಂತಿಯ ಒಂದು ಭಾಗವಾಗಿದೆ ಮತ್ತು ಅದು ಹಿಂಸಾಚಾರವನ್ನು ತಕ್ಷಣವೇ ಅಂತ್ಯಗೊಳಿಸಲು. ಇದು ನಮ್ಮ ತಾತ್ವಿಕ ನಿಲುವು ಮತ್ತು ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ವೇದಿಕೆಗಳು ಮತ್ತು ಚರ್ಚೆಗಳಲ್ಲಿ ನಮ್ಮ ಸ್ಥಾನವನ್ನು ಸತತವಾಗಿ ಮಾರ್ಗದರ್ಶನ ಮಾಡಿದೆ ಎಂದು ಜೈಶಂಕರ್ ಹೇಳಿದರು.