ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಎರಡನೇ ದಿನದ ಅಭ್ಯಾಸ ಪಂದ್ಯದಲ್ಲಿ ಇಂದು ಇಂಡಿಯಾ-ಇಂಗ್ಲೆಂಡ್ ತಂಡಗಳು ಸೆಣೆಸಾಡಲಿವೆ. ನಿನ್ನೆಯಿಂದ ಅಭ್ಯಾಸ ಪಂದ್ಯಗಳು ಆರಂಭವಾಗಿದ್ದು, ಮೂರು ಪಂದ್ಯಗಳು ನಡೆದಿವೆ, ಇಂದು ಭಾರತ ಹಾಗೂ ಇಂಗ್ಲೆಂಡ್ ಎದುರಾಗಲಿವೆ.
ಈಗಾಗಲೇ ತಂಡಗಳು ಗುವಾಹಟಿ ತಲುಪಿದ್ದು, ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯಕ್ಕೆ ತಯಾರಿ ಮಾಡಿಕೊಳ್ಳುತ್ತಿವೆ. ಅಕ್ಟೋಬರ್ 3ರಂದು ತಿರುವನಂತಪುರದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಭಾರತ ಎರಡನೇ ಅಭ್ಯಾಸ ಪಂದ್ಯ ಆಡಲಿದೆ.
ಇಂದು ಮಧ್ಯಾಹ್ನ ಭಾರತ-ಇಂಗ್ಲೆಂಡ್ ಪಂದ್ಯ ಆರಂಭವಾಗಲಿದ್ದು, ಎರಡು ಗಂಟೆಗೆ ಪಂದ್ಯ, 1:30ಕ್ಕೆ ಟಾಸ್ ನಡೆಯಲಿದೆ.