ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ಕೇಂದ್ರ ಸರಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಫ್ರಾನ್ಸ್ ಜೊತೆ ಇಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.
ಭಾರತ ಇಂದು ಫ್ರಾನ್ಸ್‌ನಿಂದ 26 ರಫೇಲ್ ಫೈಟರ್ ಜೆಟ್‌ಗಳನ್ನು ಖರೀದಿ ಮಾಡುವ ಒಪ್ಪಂದ ಮಾಡಿಕೊಂಡಿದೆ.
ಈಗಾಗಲೇ ಭಾರತೀಯ ವಾಯುಪಡೆಯಲ್ಲಿ ರಫೇಲ್ ಫೈಟರ್ ಜೆಟ್‌ಗಳು ಇವೆ. ಅವುಗಳಲ್ಲಿ 2 ಸ್ಕ್ವಾಡ್ರನ್ (Squadron) ರಫೇಲ್ ಫೈಟರ್ ಜೆಟ್‌ಗಳು ಪಾಕ್ ಮತ್ತು ಚೀನಾ ಗಡಿಯಲ್ಲಿ ನಿಯೋಜನೆ ಮಾಡಲಾಗಿದೆ.
ಇದೀಗ ಫ್ರಾನ್ಸ್‌ನಿಂದ ಭಾರತ 63 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 26 ರಫೇಲ್ ಫೈಟರ್ ಜೆಟ್‌ಗಳನ್ನು ಖರೀದಿ ಮಾಡಲಾಗುತ್ತಿದೆ. 4.5 ಜನರೇಷನ್‌ನ ಈ ರಫೇಲ್ ಫೈಟರ್ ಜೆಟ್‌ಗಳು ವಾಯುಪಡೆಗೆ ಸೇರ್ಪಡೆಯಾಗುತ್ತಿರೋದು ಭಾರತೀಯ ಸೇನೆಗೆ ಹೆಚ್ಚಿನ ಬಲ ತರಲಿದೆ.