ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನ ದೇಶಗಳು ಪರಸ್ಪರ ತನ್ನ ವಾಯುಮಾರ್ಗ ಸ್ಥಗಿತಗೊಳಿಸಿದ್ದು, ಇದೀಗ ವಾಯುಮಾರ್ಗ ಸ್ಥಗಿತತೆಯನ್ನು ಭಾರತ ಸರ್ಕಾರ ಇನ್ನೂ 1 ತಿಂಗಳು ವಿಸ್ತರಿಸಿದೆ.
ಪಾಕಿಸ್ತಾನದ ವಿಮಾನಗಳಿಗೆ ಭಾರತವು NOTAM (ವಾಯುಗಾಮಿಗಳಿಗೆ ಸೂಚನೆ) ಅನ್ನು ಒಂದು ತಿಂಗಳ ಕಾಲ ವಿಸ್ತರಿಸಿದ್ದು, ಜೂನ್ 23, 2025 ರವರೆಗೆ ಇದು ಜಾರಿಯಲ್ಲಿರುತ್ತದೆ.
ಪಾಕಿಸ್ತಾನದಲ್ಲಿ ನೋಂದಾಯಿಸಲಾದ ACFT ಗಳು ಮತ್ತು ಮಿಲಿಟರಿ ವಿಮಾನಗಳು ಸೇರಿದಂತೆ ಪಾಕಿಸ್ತಾನಿ ವಿಮಾನಯಾನ ಸಂಸ್ಥೆಗಳು,ನಿರ್ವಾಹಕರು ನಿರ್ವಹಿಸುವ,ಮಾಲೀಕತ್ವ ಹೊಂದಿರುವ ಅಥವಾ ಗುತ್ತಿಗೆ ಪಡೆದ ACFT ಗಳಿಗೆ ಭಾರತೀಯ ವಾಯುಪ್ರದೇಶ ಬಳಕೆಗೆ ಹೇರಲಾಗಿದ್ದ ನಿರ್ಬಂಧವನ್ನು ಇನ್ನೂ ಒಂದು ತಿಂಗಳ ಕಾಲ ಮುಂದುವರೆಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.