ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಟ್ರೇಡ್ ಡೀಲ್ ಮಾಡಿಕೊಳ್ಳುವಾಗ ದೇಶದ ಹಿತಾಸಕ್ತಿ ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.
ಭಾರತ ಕಳೆದ ದಶಕದಲ್ಲಿ ವಿಶ್ವದ ದುರ್ಬಲ ಆರ್ಥಿಕತೆಯಿಂದ ಅತಿವೇಗವಾಗಿ ಅಭಿವೃದ್ಧಿಯಾಗುತ್ತಿರುವ ಆರ್ಥಿಕತೆಯ ದೇಶವಾಗಿ ಬೆಳೆದಿದೆ ಎಂದಿದ್ದಾರೆ. ಭಾರತ ‘ಸತ್ತ’ ಆರ್ಥಿಕತೆ ಎಂದು ಡೊನಾಲ್ಡ್ ಟ್ರಂಪ್ ಕೊಟ್ಟಿದ್ದ ಹೇಳಿಕೆಗೆ ಭಾರತ ಪರೋಕ್ಷವಾಗಿ ತಿರುಗೇಟು ನೀಡಿದೆ.
‘ಜಾಗತಿಕ ಆರ್ಥಿಕತೆಯಲ್ಲಿ ಭಾರತ ಬೆಳಗುತ್ತಿದೆ ಎಂದು ಇವತ್ತು ಜಾಗತಿಕ ಸಂಸ್ಥೆಗಳು ಮತ್ತು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ’ ಎಂದು ಭಾರತದ ಶಕ್ತಿ ಬಗ್ಗೆ ಪಿಯೂಶ್ ಗೋಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಪ್ರಕಟಿಸಿದ ಟ್ಯಾರಿಫ್ಗಳಿಂದ ಏನು ಪರಿಣಾಮಗಳಾಗಬಹುದು ಎಂದು ಭಾರತ ಅವಲೋಕಿಸುತ್ತಿದೆ ಎಂದು ಹೇಳಿದ ಅವರು, ಯಾವುದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಾಗ ದೇಶದ ಹಿತಾಸಕ್ತಿ ರಕ್ಷಣೆಯೇ ಆದ್ಯತೆಯಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.