ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲರಿಗೂ ಆಶ್ರಯ ನೀಡಲು ಭಾರತ ಧರ್ಮಶಾಲೆಯಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.
ಶ್ರೀಲಂಕಾದ ತಮಿಳರು ತಮಗೆ ಭಾರತದಲ್ಲಿ ಆಶ್ರಯ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿದ ಸರ್ವೋಚ್ಛ ನ್ಯಾಯಾಲಯ, ನಿಮಗೆ ಭಾರತದಲ್ಲಿ ನೆಲೆಸಲು ಯಾವ ಹಕ್ಕಿದೆ ಎಂದು ಪ್ರಶ್ನಿಸಿದೆ.
ವಿಶ್ವದ ಎಲ್ಲಾ ಕಡೆ ಇರುವ ನಿರಾಶ್ರಿತರಿಗೆ ಆಶ್ರಯ ಕೊಡಲು ಭಾರತ ಧರ್ಮಶಾಲೆಯಲ್ಲ. ಬೇರೆ ಯಾವುದಾದರೂ ದೇಶಕ್ಕೆ ಹೋಗಿ ಆಶ್ರಯ ಕೇಳಿ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
LTTE ಮಾಜಿ ಕೇಡರ್, ಶ್ರೀಲಂಕಾದ ತಮಿಳರು ತಮಗೆ ಆಶ್ರಯ ನೀಡಲು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನಿಮಗೆ ಭಾರತದಲ್ಲಿ ನೆಲೆಸಲು ಯಾವ ಹಕ್ಕು ಇಲ್ಲ ಎಂದಿರುವ ಸುಪ್ರೀಂಕೋರ್ಟ್, ಭಾರತ ಎಲ್ಲರಿಗೂ ಆಶ್ರಯ ನೀಡಲು ಸಾಧ್ಯವಿಲ್ಲ ಎಂದಿದೆ.