ಕೆಲವರ ಕೃತ್ಯಕ್ಕೆ ಭಾರತವನ್ನು ದೂಷಿಸುವುದಿಲ್ಲ: ಅತ್ಯಾಚಾರಕ್ಕೊಳಗಾದ ವಿದೇಶಿ ಮಹಿಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾನು ಭಾರತದಾದ್ಯಂತ ಸುಮಾರು 20,000 ಕಿಮೀ ಸುರಕ್ಷಿತವಾಗಿ ಪ್ರಯಾಣಿಸಿದ್ದೇನೆ. ಆದರೆ ಕೆಲವೇ ಕೆಲವು ಕಾಮುಕರ ಕೃತ್ಯಕ್ಕೆ ಭಾರತವನ್ನು ದೂಷಿಸುವುದಿಲ್ಲ ಎಂದು ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ವಿದೇಶಿ ಮಹಿಳೆ ಮಂಗಳವಾರ ಹೇಳಿದ್ದಾರೆ.

ತಮ್ಮ ಪತಿಯೊಂದಿಗೆ ತಮ್ಮ ಮೋಟಾರ್‌ಸೈಕಲ್‌ನಲ್ಲಿ ಬಿಹಾರ ಮೂಲಕ ನೇಪಾಳಕ್ಕೆ ತೆರಳುವ ಮೊದಲು ಮಾತನಾಡಿದ ವಿದೇಶಿ ಮಹಿಳೆ, ತಮ್ಮ ವಿಶ್ವ ಪ್ರವಾಸವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಭಾರತದ ಜನ ಒಳ್ಳೆಯವರು. ನಾನು ಈ ದೇಶದ ಜನರನ್ನು ದೂಷಿಸುವುದಿಲ್ಲ. ಆದರೆ ಅಪರಾಧಿಗಳನ್ನು ದೂಷಿಸುತ್ತೇನೆ. ಭಾರತದ ಜನ ನನ್ನನ್ನು ಚೆನ್ನಾಗಿ ನಡೆಸಿಕೊಂಡಿದ್ದಾರೆ ಮತ್ತು ಅವರು ತುಂಬಾ ಕರುಣಾಮಯಿಯಾಗಿದ್ದಾರೆ ಎಂದು ಭಾರತ ಪ್ರವಾಸ ಕೈಗೊಂಡಿದ್ದ ಮಹಿಳೆ ಹೇಳಿದ್ದಾರೆ.

ಜಾರ್ಖಂಡ್ ರಾಜಧಾನಿ ರಾಂಚಿಯಿಂದ 300 ಕಿಮೀ ದೂರದಲ್ಲಿರುವ ಹನ್ಸ್‌ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಮಹತ್‌ನಲ್ಲಿ 28 ವರ್ಷದ ವಿದೇಶಿ ಮಹಿಳೆ ಶುಕ್ರವಾರ ತನ್ನ ಪತಿಯೊಂದಿಗೆ ಟೆಂಟ್‌ನಲ್ಲಿ ರಾತ್ರಿ ಕಳೆಯುತ್ತಿದ್ದಾಗ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾವು ರಾತ್ರಿ ತಂಗಲು ಶಾಂತ ಮತ್ತು ಸುಂದರವಾಗಿದ್ದ ನಿರ್ಜನ ಸ್ಥಳವನ್ನು ಆರಿಸಿಕೊಂಡಿದ್ದೇವೆ. ನಾವು ಅಲ್ಲಿ ಒಬ್ಬರೇ ಇದ್ದರೂ ಏನೂ ಆಗುವುದಿಲ್ಲ ಎಂದು ಭಾವಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಕಳೆದ ಆರು ತಿಂಗಳಿಂದ ಭಾರತದಲ್ಲಿದ್ದು, ಸುಮಾರು 20,000 ಕಿ.ಮೀ ಪ್ರಯಾಣಿಸಿದ್ದೇವೆ. ನಮಗೆ ಎಲ್ಲಿಯೂ ಯಾವುದೇ ತೊಂದರೆಯಾಗಿಲ್ಲ. ಮೊದಲ ಬಾರಿಗೆ ಈ ರೀತಿ ಆಗಿದೆ ಎಂದು ಅವರು ತಿಳಿಸಿದರು.

ಕೆಲವರಿಗೆ, ವಿಶೇಷವಾಗಿ ಹುಡುಗಿಯರಿಗೆ, ಅಂತಹ ಸಂದರ್ಭಗಳನ್ನು ಎದುರಿಸಲು ತರಬೇತಿ ಪಡೆಯುವಂತೆ ನಾನು ಹೇಳಲು ಬಯಸುತ್ತೇನೆ. ಅದು ಕಷ್ಟ ಮತ್ತು ಸುಲಭವಲ್ಲ ಎಂದು ನನಗೆ ತಿಳಿದಿದೆ. ಆದರೂ ನೀವು ಅಂತಹ ಸಂದರ್ಭಗಳನ್ನು ಧೈರ್ಯವಾಗಿ ಎದುರಿಸಬೇಕು ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!