ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತವು ಪ್ರಜಾಪ್ರಭುತ್ವದ ನಿಜವಾದ ಅರ್ಥವನ್ನು ಉಳಿಸಿಕೊಂಡು ವಿಶ್ವದಾದ್ಯಂತದ ಹಲವು ರಾಷ್ಟ್ರಗಳಿಗೆ ಸ್ಫೂರ್ತಿಯಾಗಿದೆ ಎಂದು 2025 ರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ವೆನಿಜುವೆಲಾದ ಉಕ್ಕಿನ ಮಹಿಳೆ ಎಂದೇ ಖ್ಯಾತಿ ಗಳಿಸಿರುವ ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾದೊ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ಭಾರತವನ್ನು“ಮಹಾನ್ ಮಿತ್ರ ರಾಷ್ಟ್ರ” ಎಂದು ಕರೆದರು.
ಭಾರತವು ಮುಂದಿನ ಅನೇಕ ಪೀಳಿಗೆಗಳಿಗೆ ಮಾದರಿಯಾಗಿದ್ದು, ನಿಮ್ಮ ದೇಶದಿಂದ ವಿಶ್ವದ ಅನೇಕ ರಾಷ್ಟ್ರಗಳು ಸ್ಫೂರ್ತಿ ಪಡೆಯುತ್ತಿವೆ. ಹಾಗಾಗಿ, ಪ್ರಜಾಪ್ರಭುತ್ವವನ್ನು ಯಾವಾಗಲೂ ಬಲಪಡಿಸಬೇಕು, ಅದನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು ಎಂದು ಕರೆ ನೀಡಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಮಾತನಾಡಿದ ಮಚಾದೊ,’ನಾನು ಶೀಘ್ರದಲ್ಲೇ ನರೇಂದ್ರ ಮೋದಿಯವರೊಂದಿಗೆ ಮಾತನಾಡಲು ಮತ್ತು ಅವರನ್ನು ವೆನೆಜುವೆಲಾಗೆ ಸ್ವಾಗತಿಸಲು ನಿರೀಕ್ಷಿಸುತ್ತೇನೆ. ಯಾಕಂದ್ರೆ, ಭಾರತ ನಮ್ಮ ಅತ್ಯುತ್ತಮ ಮಿತ್ರ ರಾಷ್ಟ್ರವಾಗಿದೆ ಎಂದರು.
ಇದೇ ವೇಳೆ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವದಿಂದ ಸ್ಫೂರ್ತಿ ಪಡೆದಿರುವುದಾಗಿ ತಿಳಿಸಿದ ಅವರು, ಅಹಿಂಸೆ ಎಂದರೆ ದೌರ್ಬಲ್ಯವಲ್ಲ. ಗಾಂಧೀಜಿ ವಿಶ್ವದ ಮುಂದೆ ಮಾನವೀಯತೆಯ ನಿಜವಾದ ಶಕ್ತಿ ಪ್ರದರ್ಶಿಸಿದರು. ಅದ್ರಂತೆ, ಅವರ ಹೋರಾಟದ ಜೀವನವು ನನ್ನ ಮಾರ್ಗದರ್ಶಿಯಾಗಿದೆ ಎಂದರು.

