January15, 2026
Thursday, January 15, 2026
spot_img

ಭಾರತ-ನ್ಯೂಝಿಲೆಂಡ್ ಸರಣಿ: ಮುಂದಿನ ವರ್ಷದ ಟೀಮ್ ಇಂಡಿಯಾ ವೇಳಾಪಟ್ಟಿ ಹೀಗಿದೆ ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೌತ್ ಆಫ್ರಿಕಾ ಪ್ರವಾಸದ ಬಳಿಕ ಟೀಮ್ ಇಂಡಿಯಾ ಮುಂದಿನ ಅಂತಾರಾಷ್ಟ್ರೀಯ ಸವಾಲಿಗೆ ಸಜ್ಜಾಗಿದೆ. ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಬಹುನಿರೀಕ್ಷಿತ ಸರಣಿ ಜನವರಿ 11ರಿಂದ ಆರಂಭವಾಗಲಿದ್ದು, ಒಟ್ಟು ಎಂಟು ಪಂದ್ಯಗಳು ನಡೆಯಲಿವೆ. ಈ ಸರಣಿ ಭಾರತದಲ್ಲಿ ನಡೆಯಲಿದ್ದು, ಏಕದಿನ ಹಾಗೂ ಟಿ20 ಎರಡೂ ಮಾದರಿಗಳಲ್ಲಿ ಮುಖಾಮುಖಿ ನಡೆಯಲಿದೆ.

ಮೊದಲಿಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ನಂತರ ಐದು ಪಂದ್ಯಗಳ ಟಿ20 ಸರಣಿ ಆಯೋಜಿಸಲಾಗಿದೆ. ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಟೀಮ್ ಇಂಡಿಯಾಗೆ ಈ ಸರಣಿ ಅತ್ಯಂತ ಪ್ರಮುಖವಾಗಿದೆ. ವಿಶೇಷವಾಗಿ ತಂಡದ ಸಂಯೋಜನೆ, ಆಟಗಾರರ ಫಾರ್ಮ್ ಮತ್ತು ನಾಯಕತ್ವದ ದೃಷ್ಟಿಯಿಂದ ಈ ಪಂದ್ಯಗಳು ನಿರ್ಣಾಯಕವಾಗಲಿವೆ.

ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಇತ್ತೀಚಿನ ಸರಣಿಗಳಲ್ಲಿ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಮಟ್ಟ ತಲುಪಿಲ್ಲ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಸರಣಿ ಅವರಿಗೊಂದು ದೊಡ್ಡ ಅವಕಾಶವಾಗಿದ್ದು, ಲಯಕ್ಕೆ ಮರಳಬೇಕಾದ ಒತ್ತಡವೂ ಇದೆ. ಜೊತೆಗೆ ಯುವ ಆಟಗಾರರಿಗೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಅವಕಾಶವೂ ಈ ಸರಣಿಯಿಂದ ಸಿಗಲಿದೆ.

ಏಕದಿನ ಸರಣಿಯ ಪಂದ್ಯಗಳು ವಡೋದರಾ, ರಾಜ್‌ಕೋಟ್ ಮತ್ತು ಇಂದೋರ್‌ನಲ್ಲಿ ನಡೆಯಲಿದ್ದರೆ, ಟಿ20 ಪಂದ್ಯಗಳು ನಾಗ್ಪುರ, ರಾಯ್ಪುರ, ಗುವಾಹಟಿ, ವಿಶಾಖಪಟ್ಟಣ ಮತ್ತು ತಿರುವನಂತಪುರಂನಲ್ಲಿ ಜರುಗಲಿವೆ. ಏಕದಿನ ಸರಣಿಗಳು ಮಧ್ಯಾಹ್ನ 1:30 ಕ್ಕೆ ಆರಂಭವಾದರೆ, ಟಿ20 ಪಂದ್ಯಗಳು ರಾತ್ರಿ 7:00 ಕ್ಕೆ ಶುರುವಾಗಲಿದೆ.

Most Read

error: Content is protected !!