ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ 2023ರ ಭಾರತ-ಪಾಕಿಸ್ತಾನ ನಡುವಣ ಮೀಸಲು ಪಂದ್ಯ ಇಂದು ಮಧ್ಯಾಹ್ನ 3 ಗಂಟೆಗೆ ಪುನಃ ಆರಂಭವಾಗಲಿದೆ.
ಕೊಲಂಬೋದಲ್ಲಿ ಭಾನುವಾರ ನಿರಂತರ ಮಳೆ ಸುರಿದಿದ್ದು, ಸ್ಟೇಡಿಯಂ ಕೆರೆಯಂತೆ ಕಾಣುತ್ತಿತ್ತು. ಭಾರತ-ಪಾಕಿಸ್ತಾನ ಮ್ಯಾಚ್ ಪಂದ್ಯವನ್ನು ಇಂದಿಗೆ ಮುಂದೂಡಲಾಗಿದ್ದು, ಇಂದು ಕೂಡ ಮಳೆಯಾಗುವ ಸಾಧ್ಯತೆ ಇದೆ.
ನಿನ್ನೆ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 24 ಓವರ್‌ಗಳ ಆಟ ಮುಗಿಸಿದ್ದು, ಏಕಾಏಕಿ ಮಳೆ ಆರಂಭವಾಗಿತ್ತು. ಹವಾಮಾನ ವರದಿ ಪ್ರಕಾರ ಇಂದು ಕೂಡ ಮಳೆಯಾಗುವ ಸಾಧ್ಯತೆ ಇದೆ. ಕೊಲಂಬೊದಲ್ಲಿ ಈಗಲೂ ಮೋಡ ಮುಸುಕಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗುತ್ತಿದೆ.