ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ-ಪಾಕಿಸ್ತಾನ ನಡುವಣ ಉದ್ವಿಗ್ನ ಪರಿಸ್ಥಿತಿ ಮಧ್ಯೆ ಭಾರತ ಸರ್ಕಾರ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಮೇ 15 ರವರೆಗೆ ದೇಶಾದ್ಯಂತ 32 ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲು ಆದೇಶಿಸಿದೆ.
ಈ ಹಿಂದೆ ಮೇ 10ರ ವರೆಗೆ ಸ್ಥಗಿತಗೊಳಿಸುವ ತೀರ್ಮಾನ ಘೋಷಿಸಲಾಗಿತ್ತು. ಇದೀಗ ಉದ್ವಿಗ್ನ ಪರಿಸ್ಥಿತಿ ಎದುರಾಗಿರುವ ಕಾರಣ ಮೇ 15 ರ ವರೆಗೆ ವಿಸ್ತರಣೆ ಮಾಡಲಾಗಿದೆ.
ಎಲ್ಲೆಲ್ಲಿ ವಿಮಾನ ನಿಲ್ದಾಣಗಳು ಬಂದ್?
ಚಂಡೀಗಢ
ಶ್ರೀನಗರ
ಅಮೃತಸರ
ಲೂಧಿಯಾನ
ಭುಂತರ್
ಕಿಶನ್‌ಗಢ
ಪಟಿಯಾಲ
ಶಿಮ್ಲಾ
ಜೈಸಾಲ್ಮೇರ್
ಪಠಾಣ್‌ಕೋಟ್
ಜಮ್ಮು
ಬಿಕಾನೇರ್
ಲೇಹ್
ಪೋರ್‌ಬಂದರ್ ಸೇರಿದಂತೆ 32 ವಿಮಾನ ನಿಲ್ದಾಣಗಳನ್ನು ಮೇ 15 ರವರೆಗೆ ಸ್ಥಗಿತಗೊಳಿಸಲಾಗಿದೆ. ಭದ್ರತಾ ಕಾರಣಗಳಿಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.