ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೂಗಲ್, ಮೆಟಾ ಇತ್ಯಾದಿ ಕಂಪನಿಗಳ ಆನ್ಲೈನ್ ಜಾಹೀರಾತು ಸೇವೆಗಳಿಗೆ ವಿಧಿಸಲಾಗುತ್ತಿರುವ ಶೇ. 6ರಷ್ಟು ಈಕ್ವಲೈಸೇಶನ್ ಟ್ಯಾಕ್ಸ್ ಅನ್ನು ಹಿಂಪಡೆಯಲು ಭಾರತ ಯೋಜಿಸಿದೆ. ಈ ತೆರಿಗೆಯನ್ನು ಏಪ್ರಿಲ್ 1ರಿಂದ ಹಿಂಪಡೆಯಲು ನಿರ್ಧರಿಸಲಾಗಿದೆ.
ಏಪ್ರಿಲ್ 2ರಿಂದ ಭಾರತವನ್ನೂ ಒಳಗೊಂಡಂತೆ ಎಲ್ಲಾ ದೇಶಗಳ ಮೇಲೆ ಪ್ರತಿಸುಂಕ ಹೇರುವ ಕ್ರಮಗಳನ್ನು ಜಾರಿಗೆ ತರುತ್ತಿದ್ದಾರೆ.
ಈಕ್ವಲೈಸೇಶನ್ ಟ್ಯಾಕ್ಸ್ ಅಥವಾ ಡಿಜಿಟಲ್ ಟ್ಯಾಕ್ಸ್ ಅನ್ನು ರದ್ದು ಮಾಡಲು ಭಾರತ ಮಾತ್ರವಲ್ಲ, ಬ್ರಿಟನ್ ಮೊದಲಾದ ದೇಶಗಳೂ ಮುಂದಾಗಿವೆ. ಕೆಲ ತಜ್ಞರ ಪ್ರಕಾರ, ಭಾರತ ಸರ್ಕಾರದ ಈ ನಡೆ ಸದ್ಯದ ಸಂದರ್ಭದಲ್ಲಿ ಜಾಣತನದ ನಡೆಯಾಗಿದೆ ಎಂದು ಹೇಳಲಾಗಿದೆ.