COVID UPDATE| 10 ಸಾವಿರ ಗಡಿ ದಾಟಿದ ಕೋವಿಡ್‌ ಕೇಸ್‌: 11ಮಂದಿ ಸೋಂಕಿಗೆ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ದಿನದಿನಕ್ಕೂ ಕೊರೊನಾ ಕೇಸ್‌ಗಳ ಸಂಖ್ಯೆ ಏರಿಕೆಯಾಗುತ್ತಿದೆ. ನಿನ್ನೆಗಿಂತ ಇಂದು 38% ನಷ್ಟು ಸೋಂಕು ಹೆಚ್ಚಳವಾಗಿದ್ದು, ಇಂದು ಹೊಸದಾಗಿ 10,542 ಪ್ರಕರಣಗಳು ದಾಖಲಾಗಿವೆ. ದೇಶದ ಸಕ್ರಿಯ ಕೇಸ್‌ಲೋಡ್ 63,562 ಪ್ರಕರಣಗಳಿವೆ.

ಮಂಗಳವಾರ 7,633 ಹೊಸ ಸೋಂಕುಗಳು ಮತ್ತು ಸೋಮವಾರ 9,111 ಹೊಸ ಸೋಂಕುಗಳ ಸಂಖ್ಯೆಯು ಕಳೆದ ಎರಡು ದಿನಗಳಿಂದ ಕಡಿಮೆಯಾಗುತ್ತಿತ್ತು. ಇಂದು 10,000 ಕ್ಕೂ ಹೆಚ್ಚು ಪ್ರಕರಣಗಳು ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 4,42,50,649 ಜನರು ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ದೆಹಲಿಯಲ್ಲಿ ನಾಲ್ಕು ಸಾವುಗಳು, ಹರಿಯಾಣ, ಪಂಜಾಬ್ ಮತ್ತು ಕರ್ನಾಟಕದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಕೇರಳವೂ ಸೇರಿದಂತೆ ಒಟ್ಟು 11 ಸಾವುಗಳನ್ನು ವರದಿ ಮಾಡಿದೆ.

ಕೇರಳ, ಮಹಾರಾಷ್ಟ್ರ, ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶಗಳು ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಮೊದಲ ಐದು ರಾಜ್ಯಗಳಾಗಿವೆ. ದೇಶದಲ್ಲಿ ಸಾವಿನ ಪ್ರಮಾಣವು 1.18 ಪ್ರತಿಶತದಷ್ಟಿದ್ದರೆ, ಚೇತರಿಕೆಯ ಪ್ರಮಾಣವು 98.6 ಪ್ರತಿಶತದಷ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!