ಭೂಕಂಪನಕ್ಕೆ ತತ್ತರಿಸಿದ ಮ್ಯಾನ್ಮಾರ್ ಗೆ ನೌಕಾ ಹಡಗು ಕಳುಹಿಸಿದ ಭಾರತ: ಸಹಾಯಕ್ಕೆ ಧಾವಿಸಿದ ಸೇನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭೂಕಂಪನದಿಂದ ತತ್ತರಿಸಿರುವ ಮ್ಯಾನ್ಮಾರ್ ನತ್ತ ಭಾರತದಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಭಾರತ ಶನಿವಾರ ಸಂಜೆ ಆಪರೇಷನ್‌ ಬ್ರಹ್ಮದಡಿ ಎರಡು ನೌಕಾ ಹಡಗುಗಳನ್ನು ಕಳುಹಿಸಿದ್ದು, ಏರ್ ಲಿಫ್ಟ್ ಮಾಡಲು ಫೀಲ್ಡ್ ಆಸ್ಪತ್ರೆ ವ್ಯವಸ್ಥೆ ಮಾಡಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಇತ್ತ ಹದಿನೈದು ಟನ್‌ ಪರಿಹಾರ ಸಾಮಗ್ರಿಗಳನ್ನು ಹೊತ್ತು ಭಾರತದ ವಾಯುಪಡೆಯ ಸಿ-130 ಜೆ ವಿಮಾನವು ಮ್ಯಾನ್ಮಾರ್‌ನ ಯಾಂಗಾನ್‌ ನಗರವನ್ನು ತಲುಪಿದೆ. ಟೆಂಟ್‌ಗಳು, ಬ್ಲಾಂಕೆಟ್‌ಗಳು, ಸ್ಲೀಪಿಂಗ್‌ ಬ್ಯಾಗ್‌ಗಳು, ಫುಡ್‌ ಪ್ಯಾಕೆಟ್‌ಗಳು, ಹೈಜೀನ್‌ ಕಿಟ್‌ಗಳು, ಜೆನೆರೇಟರ್‌ಗಳು ಹಾಗೂ ಅತ್ಯಗತ್ಯ ಔಷಧಿಗಳನ್ನು ಕಳುಹಿಸಲಾಗಿದೆ.

https://x.com/DrSJaishankar/status/1905959296107696397?ref_src=twsrc%5Etfw%7Ctwcamp%5Etweetembed%7Ctwterm%5E1905959296107696397%7Ctwgr%5E10ed21babeb7611f74129f400bfd36f0aee8970f%7Ctwcon%5Es1_&ref_url=https%3A%2F%2Fwww.newindianexpress.com%2Fnation%2F2025%2FMar%2F29%2Findia-sends-two-naval-ships-airlifts-field-hospital-to-myanmar-under-operation-brahma

ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದ್ದು, ಈಗಾಗಲೇ ಹದಿನೈದು ಟನ್ ಪರಿಹಾರ ಸಾಮಗ್ರಿಗಳನ್ನು ಮ್ಯಾನ್ಮಾರ್‌ಗೆ ತಲುಪಿಸಲಾಗಿದೆ ಎಂದು ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದೆ.

ಇನ್ನು118 ಸದಸ್ಯರ ಭಾರತೀಯ ಸೇನೆಯ ಫೀಲ್ಡ್ ಆಸ್ಪತ್ರೆಯ ಘಟಕ ಆಗ್ರಾದಿಂದ ಮಾಂಡಲೆಗೆ ತೆರಳುತ್ತಿದೆ. ಮ್ಯಾನ್ಮಾರ್ ಜನರಿಗೆ ಪ್ರಥಮ ಚಿಕಿತ್ಸೆ ಮತ್ತು ತುರ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲು ತಂಡವು ಸಹಾಯ ಮಾಡುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!