ಭಾರತವು ಬ್ರಿಟನ್ನನ್ನು ವಸಾಹತುವನ್ನಾಗಿ ಮಾಡಬೇಕು: ಯುಕೆ ಬಿಕ್ಕಟ್ಟಿನ ಮಧ್ಯೆ ವೈರಲ್‌ ಆಗುತ್ತಿದೆ ಹಾಸ್ಯನಟ ಟ್ರೆವರ್ ನೋಹ್ ಅವರ ಹಳೆಯ ವೀಡಿಯೊ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪ್ರಧಾನಿ ಲಿಜ್‌ ಟ್ರಸ್‌ ರಾಜೀನಾಮೆ ನೀಡಿದ ಬೆನ್ನಲ್ಲೇ ಮತ್ತೊಮ್ಮೆ ಬ್ರಿಟನ್‌ ಆಳವಾಗಿ ಪ್ರಕ್ಷುಬ್ಧವಾಗಿರುವ ಹೊತ್ತಲ್ಲಿ ʼಭಾರತವು ಬ್ರಿಟನ್ನನ್ನು ವಸಾಹತುವನ್ನಾಗಿಸಬೇಕುʼ ಎಂದು ಹೇಳಿರುವ ಹಾಸ್ಯಗಾರ ಟ್ರೆವರ್‌ ನೋಹ್‌ ಅವರ ವಿಡಿಯೋವೊಂದು ಇದೀಗ ಭಾರೀ ವೈರಲ್‌ ಆಗುತ್ತಿದೆ.

ಹಿಂದಿನ ಬ್ರಿಟಿಷ್ ವಸಾಹತು ಪ್ರದೇಶವಾದ ಭಾರತವು ವಸಾಹತುಶಾಹಿಯಾಗಿ ಆಳವಾದ ಬಿಕ್ಕಟ್ಟಿನಲ್ಲಿ ಮುಳುಗಿದ ಯುಕೆಯನ್ನು ಮೇಲೆತ್ತಬೇಕು ಎಂದು ಟ್ರೆವರ್ ಸೂಚಿಸುವುದನ್ನು ವೀಡಿಯೊದಲ್ಲಿ ಕೇಳಬಹುದು.

ವೀಡಿಯೊದಲ್ಲಿ, ಟ್ರೆವರ್ “ಈ ಸಮಯದಲ್ಲಿ, ಬ್ರಿಟನ್‌ನಲ್ಲಿನ ವಿಷಯಗಳು ತುಂಬಾ ಕೆಟ್ಟದಾಗಿದೆ, ಅವರ ಹಳೆಯ ವಸಾಹತು ದೇಶಗಳಲ್ಲಿ ಒಂದು ದೇಶವು ಯುಕೆಯನ್ನು ವಸಾಹತುವನ್ನಾಗಿ ಮಾಡಬೇಕು ಎಂದು ನಾನು ಭಾವಿಸುತ್ತೇನೆ.” ಎಂದು ಹೇಳಿದ್ದಾರೆ.

ಈ ವೀಡಿಯೋವು 2019ರ ಸಮಯದಲ್ಲಿ ಬ್ರೆಕ್ಸಿಟ್‌ ಬಿಕ್ಕಟ್ಟಿನಿಂದ ಬ್ರಿಟನ್‌ ಬಳಲುತ್ತಿದ್ದ ಸಂದರ್ಭಕ್ಕಿಂತಲೂ ಹಳೆಯದು ಎನ್ನಲಾಗಿದೆ. ಆದರೆ 2022ರಲ್ಲೂ ಅದು ಪ್ರಸ್ತುತವಾಗಿದೆ ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.

“ಭಾರತವು ಇಂಗ್ಲೆಂಡ್‌ಗೆ ಬರಬೇಕು ‘ನೋಡಿ, ನೋಡಿ ನಾವು ಇದನ್ನು ಮಾಡಲು ದ್ವೇಷಿಸುತ್ತೇವೆ, ಆದರೆ ನಿಮಗೆ ನಿಮ್ಮನ್ನು ಹೇಗೆ ಆಳಿಕೊಳ್ಳಬೇಕೆಂದು ತಿಳಿದಿಲ್ಲ. ನಾವು ಈ ಸಂಪೂರ್ಣ ವಿಷಯವನ್ನು ಸರಿಪಡಿಸಬೇಕಾಗಿದೆ, ಎನ್ನಬೇಕು ” ಎಂದು ಟ್ರೆವರ್‌ ವ್ಯಂಗ್ಯವಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!