March 12, 2026
Thursday, March 12, 2026
spot_img

ರಾವಿ ನದಿ ನೀರು ಶೀಘ್ರದಲ್ಲೇ ನಿಲ್ಲಿಸಲಿದೆ ಭಾರತ: ಹನಿ ನೀರಿಗೂ ಪಾಕ್‌ ಪರದಾಟ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇನ್ನೇನು ಬೇಸಿಗೆ ನಿಧಾನಕ್ಕೆ ಜೀವನಕ್ಕೆ ಎಂಟ್ರಿ ಕೊಡ್ತಾ ಇದೆ. ಇದೇ ಸಮಯದಲ್ಲಿ ನೀರಿಲ್ಲದೆ ಪಾಕಿಸ್ತಾನ ಒದ್ದಾಡುವ ಪರಿಸ್ಥಿತಿ ಬರುವ ಸಾಧ್ಯತೆ ಇದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದ್ದರಿಂದ ಅದು ಈಗಾಗಲೇ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಆದರೆ ಈಗ ಶಹಪುರ್ ಕಂಡಿ ಬ್ಯಾರೇಜ್ ಪೂರ್ಣಗೊಂಡ ನಂತರ, ಭಾರತವು ರಾವಿ ನದಿಯಿಂದ ಹೆಚ್ಚುವರಿ ನೀರಿನ ಹರಿವನ್ನು ನಿಲ್ಲಿಸಲಿದೆ.

ಇದರಿಂದ ಪಾಕಿಸ್ತಾನಕ್ಕೆ ನೀರಿನ ಸಮಸ್ಯೆ ಹೆಚ್ಚಾಗಲಿದೆ. ಶಾಹಪುರ್ ಕಂಡಿ ಬ್ಯಾರೇಜ್‌ನ ಕೆಲಸವು ಮಾರ್ಚ್ 31 ರೊಳಗೆ ಪೂರ್ಣಗೊಳ್ಳಲಿದೆ. ಇಲ್ಲಿಯವರೆಗೆ, ಸಂಗ್ರಹಣಾ ಸೌಲಭ್ಯಗಳ ಕೊರತೆಯಿಂದಾಗಿ, ರಾವಿಯ ಹೆಚ್ಚುವರಿ ನೀರು ಪಾಕಿಸ್ತಾನಕ್ಕೆ ಹೋಗುತ್ತಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !