ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ಪ್ರಧಾನಿ ಮೋದಿ ತಮ್ಮ ಮಾತಿನ ಮೂಲಕ ಜಾದೂ ಮಾಡಿದ್ದಾರೆ. ಅಮೆರಿಕದ ಶ್ವೇತಭವನದಲ್ಲಿ ಪ್ರಧಾನಿ ಮೋದಿಗಾಗಿ ಔತಣಕೂಟ ಏರ್ಪಡಿಸಲಾಗಿತ್ತು. ಈ ವೇಳೆ ಪ್ರಧಾನಿ ಮೋದಿ ಭಾರತ-ಅಮೆರಿಕ ಹೇಗೆ ಹತ್ತಿರ ಬರುತ್ತಿದೆ ಎನ್ನುವ ಬಗ್ಗೆ ಮಾತನಾಡಿದ್ದಾರೆ.
ದಿನಕಳೆದಂತೆ ಅಮೆರಿಕ ಭಾರತ ಹತ್ತಿರವಾಗುತ್ತಿದೆ, ಪರಸ್ಪರ ನಮ್ಮ ಹೆಸರುಗಳನ್ನು ಸರಿಯಾಗಿ ಉಚ್ಛಾರ ಮಾಡ್ತಿದ್ದೇವೆ, ನಮ್ಮ ದೇಶದ ಮಕ್ಕಳು ಹಾಲೋವೀನ್ ಆಚರಣೆಯನ್ನು ಇಷ್ಟಪಡ್ತಾರೆ, ಸ್ಪೈಡರ್‌ಮ್ಯಾನ್‌ನಂತೆ ತಯಾರಾಗಿ ಓಡಾಡ್ತಾರೆ. ಅಮೆರಿಕದ ಯೂತ್ಸ್ ನಮ್ಮ ಸಿನಿಮಾಗಳನ್ನು ಇಷ್ಟಪಡ್ತಿದ್ದಾರೆ. ನಾಟು ನಾಟು ಹಾಡಿಗೆ ಡ್ಯಾನ್ಸ್ ಮಾಡ್ತಿದ್ದಾರೆ ಎಂದಿದ್ದಾರೆ.
ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಗೆದ್ದ ಮೇಲೆ ಹೆಚ್ಚೇ ಫೇಮಸ್ ಆಗಿದ್ದು, ಜಾಗತಿಕ ಮಟ್ಟದಲ್ಲಿ ಹೆಚ್ಚು ಮನ್ನಣೆ ಗಳಿಸಿದೆ. ನಾಟು ನಾಟು ನೃತ್ಯವನ್ನು ಚಾಲೆಂಜ್ ಆಗಿ ಸ್ವೀಕರಿಸಿ ನೃತ್ಯ ಮಾಡುವುದು ಟ್ರೆಂಡ್ ಆಗಿದೆ.