January21, 2026
Wednesday, January 21, 2026
spot_img

10 ವರ್ಷಗಳ ಕಾಲ ರಕ್ಷಣಾ ಕ್ಷೇತ್ರದಲ್ಲಿ ಸಹಕಾರ: ಭಾರತ-ಅಮೆರಿಕದಿಂದ ಮಹತ್ವದ ಒಪ್ಪಂದಕ್ಕೆ ಸಹಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ 10 ವರ್ಷಗಳ ಕಾಲ ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ನೀಡುವ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ಸಹಿ ಹಾಕಿವೆ.

ಕೌಲಾಲಂಪುರದಲ್ಲಿ ನಡೆದ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮೆರಿಕ ಯುದ್ದ ಇಲಾಖೆಯ ಕಾರ್ಯದರ್ಶಿ ಪೀಟರ್ ಹೆಗ್ಸೆತ್ ನಡುವೆ ಈ ಒಪ್ಪಂದವಾಗಿದ್ದು, ಇದು ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಬಲಪಡಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಯುಎಸ್ ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ ಮಾಡಿ, ಭಾರತ ಜೊತೆಗೆ 10 ವರ್ಷಗಳ ಕಾಲ ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ನೀಡುವ ಒಪ್ಪಂದಕ್ಕೆ ಸಹಿ ಹಾಕಲು ನಾನು ರಾಜನಾಥ್ ಸಿಂಗ್ ಅವರನ್ನು ಭೇಟಿಯಾದೆ. ಎರಡು ರಾಷ್ಟ್ರಗಳ ರಕ್ಷಣಾ ಸಂಬಂಧಗಳು ಹಿಂದೆಂದೂ ಇಷ್ಟು ಬಲವಾಗಿರಲಿಲ್ಲ. ನಾವು ಸಮನ್ವಯ, ಮಾಹಿತಿ ಹಂಚಿಕೆ ಮತ್ತು ತಾಂತ್ರಿಕ ಸಹಕಾರವನ್ನು ಹೆಚ್ಚಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ಒಪ್ಪಂದವು ಭಾರತ-ಯುಎಸ್ ರಕ್ಷಣಾ ಪಾಲುದಾರಿಕೆಯನ್ನು ಮುನ್ನಡೆಸುತ್ತದೆ . ಇದನ್ನು ಪ್ರಾದೇಶಿಕ ಸ್ಥಿರತೆಗೆ ಮತ್ತು ಸಂಘರ್ಷ ತಡೆಯಲು ಮೂಲಾಧಾರ ಎಂದು ಬಣ್ಣಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ದೃಢಪಡಿಸಿದ್ದಾರೆ. ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, “ಕೌಲಾಲಂಪುರದಲ್ಲಿ ನನ್ನ ಯುಎಸ್ ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರೊಂದಿಗೆ ಫಲಪ್ರದ ಸಭೆ ನಡೆಯಿತು. ನಾವು ಮುಂದಿನ 10 ವರ್ಷಗಳ ‘ಯುಎಸ್-ಭಾರತ ಪ್ರಮುಖ ರಕ್ಷಣಾ ಪಾಲುದಾರಿಕೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಭಾರತ-ಯುಎಸ್ ರಕ್ಷಣಾ ಸಂಬಂಧ ಒಲಪಡಿಸಲು ಈ ಒಪ್ಪಂದ ನೀತಿ ನಿರ್ದೇಶನವನ್ನು ಮಾಡುತ್ತದೆ” ಎಂದು ತಿಳಿಸಿದ್ದಾರೆ.

Must Read