ಪಹಲ್ಗಾಮ್ ದಾಳಿಯನ್ನು ಭಾರತ ಶಾಂತಿ ಕದಡಲು ದಾಳವನ್ನಾಗಿ ಬಳಸಿದೆ.. ಮತ್ತೆ ಬಾಲ ಬಿಚ್ಚಿದ ಪಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಪಾಕಿಸ್ತಾನದ ನಡುವೆ ಕದಮವಿರಾಮ ಒಪ್ಪಂದ ನಡೆಸಿದ್ದರೂ ಪಾಕಿಸ್ತಾನ ಸಮಯ ಸಿಕ್ಕಾಗಲೆಲ್ಲ ವಿದೇಶಗಳ ಬಳಿಕ ಭಾರತದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದನ್ನು ನಿಲ್ಲಿಸಿಲ್ಲ. ಭಾರತವು ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಪ್ರಾದೇಶಿಕ ಶಾಂತಿಯನ್ನು ಹಾಳು ಮಾಡಲು ಬಳಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಆರೋಪಿಸಿದ್ದಾರೆ.

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯನ್ನು ಪಾಕ್ ಪ್ರದಾನಿ ಶೆಹಬಾಜ್ ಷರೀಫ್ ಉಲ್ಲೇಖಿಸಿದರು.

ಇದು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಮಾರಕವಾದ ದಾಳಿಯಾಗಿತ್ತು ಎಂದಿದ್ದಾರೆ. “ಗಾಜಾ, ಕಾಶ್ಮೀರ ಅಥವಾ ಇರಾನ್‌ನಲ್ಲಿ ಅಮಾಯಕ ಜನರ ವಿರುದ್ಧ ಅನಾಗರಿಕ ಕೃತ್ಯಗಳನ್ನು ಎಸಗುವವರ ವಿರುದ್ಧ ಪಾಕಿಸ್ತಾನ ದೃಢವಾಗಿ ನಿಲ್ಲುತ್ತದೆ” ಎಂದು ಶೆಹಬಾಜ್ ಷರೀಫ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!