Wednesday, November 26, 2025

India vs South Africa | ಸಖತ್ತಾಗಿದೆ ದಕ್ಷಿಣ ಆಫ್ರಿಕಾ ಗ್ರಿಪ್, ಸೋಲಿನತ್ತ ಮುಖ ಮಾಡಿದ ಪಂತ್ ಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುವಾಹಟಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಭರ್ಜರಿ ಮುನ್ನಡೆ ಸಾಧಿಸಿ ಪಂದ್ಯವನ್ನು ತಮ್ಮತ್ತ ತಿರುಗಿಸಿಕೊಂಡಿದೆ. ನಾಲ್ಕನೇ ದಿನ ಊಟದ ವಿರಾಮದ ವೇಳೆಗೆ 4 ವಿಕೆಟ್ ನಷ್ಟಕ್ಕೆ 220 ರನ್ ಸೇರಿಸಿದ ಆಫ್ರಿಕಾ, ಒಟ್ಟು 508 ರನ್‌ಗಳ ಮುನ್ನಡೆ ಸಾಧಿಸಿದೆ. ಇದರಿಂದ ಭಾರತಕ್ಕೆ ಪಂದ್ಯ ಉಳಿಸಿಕೊಳ್ಳುವುದೇ ಸವಾಲಾಗಿದೆ.

ಭಾರತ ಮೊದಲ ಇನಿಂಗ್ಸ್‌ನಲ್ಲಿ ಕೇವಲ 201 ರನ್‌ಗಳಿಗೆ ಸೀಮಿತವಾದ ನಂತರ, ಈಗ 500 ಕ್ಕೂ ಹೆಚ್ಚು ಗುರಿ ಬೆನ್ನಟ್ಟುವ ಪರಿಸ್ಥಿತಿ ಎದುರಾಗಿದೆ. ಟೆಸ್ಟ್ ಇತಿಹಾಸದಲ್ಲಿ ನಾಲ್ಕನೇ ಇನಿಂಗ್ಸ್‌ನಲ್ಲಿ 500+ ರನ್ ಬೆನ್ನತ್ತಿ ಗೆದ್ದ ದಾಖಲೆ ಇಲ್ಲದ ಕಾರಣ, ಭಾರತಕ್ಕೆ ಡ್ರಾ ಮಾತ್ರ ವಾಸ್ತವಿಕ ಆಯ್ಕೆಯಾಗಿದೆ.

ಪಂದ್ಯ ಡ್ರಾ ಆದರೂ ದಕ್ಷಿಣ ಆಫ್ರಿಕಾಕ್ಕೆ 1-0 ಅಂತರದ ಸರಣಿ ಜಯ ಖಚಿತ. ದಶಕಗಳ ನಂತರ ಭಾರತ ನೆಲದಲ್ಲಿ ಆಫ್ರಿಕಾ ಸರಣಿ ಗೆಲ್ಲುವ ಸಾಧ್ಯತೆ ಎದುರಾಗಿದ್ದು, ಟೀಮ್ ಇಂಡಿಯಾ ಈಗ ಸರಣಿ ಉಳಿಸಿಕೊಳ್ಳುವ ಹೋರಾಟದಲ್ಲಿದೆ.

error: Content is protected !!