Monday, December 8, 2025

India vs South africa | ಟಿ20 ಕದನಕ್ಕೆ ವೇದಿಕೆ ಸಜ್ಜು: ಪಂದ್ಯ ಎಷ್ಟು ಗಂಟೆಗೆ ಶುರು? ಎಲ್ಲಿ ನೋಡ್ಬಹುದು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ರೋಚಕ ಅಧ್ಯಾಯಕ್ಕೆ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಸಜ್ಜಾಗಿವೆ. ಐದು ಪಂದ್ಯಗಳ ಟಿ20 ಸರಣಿ ನಾಳೆ ಡಿಸೆಂಬರ್ 9ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ಒಡಿಶಾದ ಕಟಕ್‌ನ ಐಕಾನಿಕ್ ಬಾರಾಬತಿ ಸ್ಟೇಡಿಯಂನಲ್ಲಿ ನಡೆಯಲಿದೆ. ಉಭಯ ತಂಡಗಳ ಯುವ ಹಾಗೂ ಅನುಭವಿಗಳ ಸಂಯೋಜನೆ ಈ ಸರಣಿಯ ಕುತೂಹಲವನ್ನು ಹೆಚ್ಚಿಸಿದೆ.

ಸರಣಿಯ ಎರಡನೇ ಪಂದ್ಯ ಚಂಡೀಗಢದ ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿದ್ದು, ಮೂರನೇ ಹಾಗೂ ನಾಲ್ಕನೇ ಪಂದ್ಯಗಳಿಗೆ ಕ್ರಮವಾಗಿ ಧರ್ಮಶಾಲಾ ಮತ್ತು ಲಕ್ನೋ ಆತಿಥ್ಯ ವಹಿಸಲಿವೆ. ಡಿಸೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಐದನೇ ಪಂದ್ಯ ಸರಣಿಯ ಫಿನಾಲೆಯಾಗಲಿದೆ.

ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಸೌತ್ ಆಫ್ರಿಕಾ ಪರ ನಾಯಕನ ಜವಾಬ್ದಾರಿ ಐಡನ್ ಮಾರ್ಕ್ರಾಮ್ ಹೊತ್ತಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಆರಂಭವಾಗಲಿದ್ದು, ಟಾಸ್ ಸಂಜೆ 6.30ಕ್ಕೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ಸರಣಿಯ ನೇರ ಪ್ರಸಾರ ಲಭ್ಯವಿದ್ದು, ಜಿಯೋ ಹಾಟ್‌ಸ್ಟಾರ್ ಮೂಲಕ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.

error: Content is protected !!