April 16, 2026
Thursday, April 16, 2026
spot_img

ಬ್ರೇಕ್ ನಂತರ ಬ್ಯಾಕ್ ಟು ವರ್ಕ್: ಲ್ಯಾಪ್‌ಟಾಪ್‌ಗಿಂತ ಮೊದಲು ನಿಮ್ಮ ಮನಸ್ಸನ್ನು ಆನ್ ಮಾಡಿ

ನಗುನಗುತ್ತಾ ಕಳೆದ ರಜೆ ಮುಗಿದು, ಮತ್ತೆ ಲ್ಯಾಪ್‌ಟಾಪ್ ಆನ್ ಮಾಡುವುದು ಬೆಟ್ಟ ಹೊತ್ತಷ್ಟೇ ಭಾರ ಎನಿಸಬಹುದು. ಇದನ್ನು ‘ಪೋಸ್ಟ್-ವೆಕೇಶನ್ ಬ್ಲೂಸ್’ ಎಂದು ಕರೆಯುತ್ತಾರೆ. ಇದನ್ನು ಸ್ಮಾರ್ಟ್ ಆಗಿ ಹ್ಯಾಂಡಲ್ ಮಾಡುವುದು ಹೇಗೆ?

ರಜೆ ಮುಗಿದ ದಿನವೇ ಕೆಲಸಕ್ಕೆ ಹೋಗುವ ಬದಲು, ಒಂದು ದಿನ ಮೊದಲೇ ಮನೆಗೆ ಮರಳಿ. ಮರುದಿನದ ಕೆಲಸಕ್ಕೆ ಮಾನಸಿಕವಾಗಿ ಸಿದ್ಧರಾಗಲು ಸಮಯ ಮೀಸಲಿಡಿ.

ಕೆಲಸಕ್ಕೆ ಮರಳಿದ ಮೊದಲ ದಿನವೇ ನೂರಾರು ಇಮೇಲ್‌ಗಳಿಗೆ ರಿಪ್ಲೈ ಮಾಡಲು ಹೋಗಬೇಡಿ. ಮೊದಲು ‘Urgent’ ಅಥವಾ ‘Important’ ಎಂದು ಮಾರ್ಕ್ ಆಗಿರುವ ಮೇಲ್‌ಗಳನ್ನು ಮಾತ್ರ ನೋಡಿ. ಉಳಿದವುಗಳನ್ನು ನಿಧಾನವಾಗಿ ಗಮನಿಸಬಹುದು.

ಮೊದಲ ದಿನವೇ ಎಲ್ಲಾ ಪ್ರಾಜೆಕ್ಟ್‌ಗಳನ್ನು ಮುಗಿಸುತ್ತೇನೆ ಎಂಬ ಹಠ ಬೇಡ. ಆ ದಿನ ಮಾಡಬೇಕಾದ ಪ್ರಮುಖ ೩ ಕೆಲಸಗಳನ್ನು ಮಾತ್ರ ಬರೆದಿಟ್ಟುಕೊಳ್ಳಿ. ಸಣ್ಣ ಸಣ್ಣ ಗುರಿಗಳು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.

ಸಹೋದ್ಯೋಗಿಗಳೊಂದಿಗೆ ಹರಟೆ ಹೊಡೆಯಿರಿ, ಮತ್ತೆ ಕೆಲಸದ ಮೂಡ್‌ಗೆ ಬರಲು ಇದು ಸುಲಭ ದಾರಿ. ರಜೆಯ ಅನುಭವಗಳನ್ನು ಹಂಚಿಕೊಳ್ಳುವುದು ಮತ್ತು ಆಫೀಸ್‌ನಲ್ಲಿ ಏನಾಯ್ತು ಎಂದು ತಿಳಿದುಕೊಳ್ಳುವುದು ನಿಮ್ಮನ್ನು ತಂಡದೊಂದಿಗೆ ಮತ್ತೆ ಬೇಗನೆ ಬೆರೆಯುವಂತೆ ಮಾಡುತ್ತದೆ.

ಕೆಲಸದ ಒತ್ತಡ ಹೆಚ್ಚಾದಾಗ ಸಮಾಧಾನ ತಂದುಕೊಡುವ ವಿಚಾರವೆಂದರೆ ಮುಂದಿನ ರಜೆ. ಮುಂದಿನ ಟ್ರಿಪ್ ಅಥವಾ ವೀಕೆಂಡ್ ಪ್ಲಾನ್ ಬಗ್ಗೆ ಯೋಚಿಸುವುದು ನಿಮ್ಮ ಇಂದಿನ ಕೆಲಸಕ್ಕೆ ಒಂದು ಸಣ್ಣ ಪ್ರೇರಣೆ ನೀಡಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !