July 27, 2026
Monday, July 27, 2026
spot_img

ಪಹಲ್ಗಾಮ್‌ ಅಟ್ಯಾಕ್‌ಗೆ 1 ವರ್ಷ| ಭಾರತ ಭಯೋತ್ಪಾದನೆಗೆ ತಲೆಬಾಗುವ ದೇಶವಲ್ಲ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತ ಯಾವುದೇ ರೀತಿಯ ಭಯೋತ್ಪಾದನೆಗೆ ಎಂದಿಗೂ ತಲೆಬಾಗುವುದಿಲ್ಲ. ಇಂಥವರು ಕೃತ್ಯಗಳು ನಮ್ಮ ದೇಶದಲ್ಲಿ ಕೆಲಸ ಮಾಡೋದಿಲ್ಲ ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ.

ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಭಾವನಾತ್ಮಕ ಪೋಸ್ಟ್‌ ಒಂದನ್ನು ಮಾಡಿದ್ದಾರೆ.

ಸರಿಯಾಗಿ ಇಂದಿಗೆ ಒಂದು ವರ್ಷ! ಅದೊಂದು ಕರಾಳ ದಿನ. ಪಹಲ್ಗಾಮ್‌ ದಾಳಿಯಲ್ಲಿ ಜೀವಕಳೆದುಕೊಂಡ ಎಲ್ಲರನ್ನೂ ನೆನಪಿಸಿಕೊಳ್ಳುತ್ತಿದ್ದೇನೆ. ಅವರನ್ನು ಮರೆಯೋಕೆ ಸಾಧ್ಯವಾ? ಮುಗ್ಧರಲ್ಲವೇ? ಕುಟುಂಬದ ಜೊತೆ ಸಮಯ ಕಳೆಯೋಕೆ ಹೋದವರಲ್ಲವೆ? ಈ ದುಃಖ ಭರಿಸೋದಕ್ಕೆ ನನಗೇ ಕಷ್ಟವಾಗುತ್ತಿದೆ. ಇನ್ನು ಅವರೆ ಕುಟುಂಬದ ಬಗ್ಗೆ ಆಲೋಚನೆ ಮಾಡೋದಕ್ಕೂ ಆಗುತ್ತಿಲ್ಲ. ಆದರೆ ಒಂದು ಹೇಳುತ್ತೇನೆ ಈ ಕುಟುಂಬಗಳ ಜೊತೆ ನಾವಿದ್ದೇವೆ. ಒಂದು ರಾಷ್ಟ್ರವಾಗಿ ನಾವು ಕಷ್ಟ ಸುಖಗಳಲ್ಲಿಒಟ್ಟಿಗೇ ಇರಬೇಕು.

ಪಹಲ್ಗಾಮ್‌ ದಾಳಿಯಲ್ಲಿ 26 ಮುಗ್ಧರು ಪ್ರಾಣ ಕಳೆದುಕೊಂಡಿದ್ದಾರೆ. ಅವರಿಗೆ ನನ್ನ ಸಂತಾಪಗಳು. ಒಂದು ವರ್ಷದ ಹಿಂದೆ ಜಮ್ಮು ಕಾಶ್ಮೀರದ ಸ್ವರ್ಗ ಬೈಸರನ್‌ನ್ನು ಸ್ಮಶಾನವನ್ನಾಗಿ ಬದಲಾಯಿಸಿದ ಭಯತೋತ್ಪಾದಕರ ಹುಟ್ಟಡಗಿಸಿದ್ದೇವೆ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !