ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ವಾಯುಪಡೆಯ ಎಎಲ್‌ಎಚ್ ಧ್ರುವ ಹೆಲಿಕಾಪ್ಟರ್ ಭಾನುವಾರ ಮಧ್ಯಪ್ರದೇಶ ರಾಜ್ಯದ ಭೋಪಾಲ್ ನಗರದ ಸಮೀಪವಿರುವ ಹೊಲವೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಹೊಲದಲ್ಲಿ ಇಳಿಸಲಾಗಿದೆ ಎಂದು ಭಾರತೀಯ ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಹೆಲಿಕಾಪ್ಟರ್‌ನಲ್ಲಿರುವ ಸಿಬ್ಬಂದಿ ಪ್ರಸ್ತುತ ಸುರಕ್ಷಿತವಾಗಿದ್ದು, ತಾಂತ್ರಿಕ ದೋಷ ಸರಿಪಡಿಸಲು ಹೆಲಿಕಾಪ್ಟರ್ ಇಳಿದ ಪ್ರದೇಶಕ್ಕೆ ತಜ್ಞರ ತಂಡ ಬರಲಿದೆ. ಭಾರತೀಯ ವಾಯುಪಡೆಯ ALH ಧ್ರುವ Mk 3 ಹೆಲಿಕಾಪ್ಟರ್, ಮಿಷನ್‌ನ ಭಾಗವಾಗಿ ಭೋಪಾಲ್‌ನಿಂದ ಚಕೇರಿಗೆ ತೆರಳುತ್ತಿತ್ತು.
ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ಭೋಪಾಲ್‌ನಿಂದ 60 ಕಿಮೀ ದೂರದಲ್ಲಿರುವ ಬೆರಾಸಿಯಾ ಗ್ರಾಮದಲ್ಲಿ ಮುನ್ನೆಚ್ಚರಿಕೆ ಲ್ಯಾಂಡಿಂಗ್ ಮಾಡಿದೆ. ಹೆಲಿಕಾಪ್ಟರ್‌ನಲ್ಲಿ ಆರು ಮಂದಿ ಸೇನಾ ಸಿಬ್ಬಂದಿಯಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ.